Posts

ಅರೆಭಾಷೆ ದಿನಾಚರಣೆ - ನೆಹರು‌ ಮೆಮೋರಿಯಲ್ ಕಾಲೇಜು ಸುಳ್ಯ

Image
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ - ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಕೂಡ್‌ಕಟ್ಟ್‌ಲಿ ಅರೆಭಾಷೆ ದಿನಾಚರಣೆ (ಡಿಸೆಂಬರ್ 15) ನ ಕಾರ್ಯಕ್ರಮ ಕಾಲೇಜ್‌ನ ದೃಶ್ಯ-ಶ್ರಾವ್ಯ ಕೊಠಡಿಲಿ ನಡ್ತ್. ಕಾಲೇಜಿನ ಪ್ರಾಂಶುಪಾಲರ್‌ನೂ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಪೋಷಕರೂ ಆದ ಶ್ರೀ ರುದ್ರಕುಮಾರ್ ಎಂ.ಎಂ ಅವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದೊ. ಅರೆಭಾಷೆ ಸಂಘದ ಸಂಚಾಲಕರಾದ ಶ್ರೀ ಸಂಜೀವ ಕುದ್ಪಾಜೆ ಅವು ಜಂಬರಕ್ಕೆ ಪ್ರಾಸ್ತಾವಿಕ ಮಾತನಾಡ್ದೊ. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ ಅವು ನೊಙ ಏರ್‌ಸಿ ಕಾರ್ಯಕ್ರಮಕ್ಕೆ ಸಾಂಕೇತಿಕ ಉದ್ಘಾಟನೆ ಮಾಡಿ ಮಾತನಾಡ್ದೊ. ಅರೆಭಾಷೆ ಸಂಸ್ಕೃತಿನ ಉಳ್ಸಿ ಬೆಳ್ಸುವ ಜವಾಬ್ದಾರಿ ಯುವ ಜನತೆನ ಮೇಲೆ ಉಟ್ಟು ಅಂತ ಅವು ಹೇಳ್ದೊ. ಕಾಲೇಜಿನ ನಿವೃತ್ತ ಪ್ರಾಂಶುಪಾಲರ್ ಹಂಗೆನೇ ಅರೆಭಾಷೆ ಅಕಾಡೆಮಿನ ಮಾಜಿ ಸದಸ್ಯರಾದ ಡಾ. ಪೂವಪ್ಪ ಕಣಿಯೂರು ಅವು ಜಂಬರದ ನೆಂಟ್ರ್‌ಗ ಆಗಿ ಆಗಮಿಸಿ ಅರೆಭಾಷೆನ ಕುರಿತ್ ವೈಚಾರಿಕ ನೆಲೆಕಟ್ಟ್‌ಲಿ ಮಾತನಾಡ್ದೊ. ಮೋಹನ್ ಸೋನಾರ ಸಾಕ್ಷ್ಯಚಿತ್ರಕ್ಕೆ ಪ್ರದರ್ಶನ ಕೊಡ್ತಾ ಅವರ ಕೊಡುಗೆಗ ಅರೆಭಾಷೆ ಅಕಾಡಮಿಗೆ ದೊಡ್ಡ ಪ್ರಮಾಣಲಿ ಉಟ್ಟು, ಕಲೆನ ಉಸಿರ್‌ನ ಹಾಂಗೆ ಇಸಿಕಂಡ ಸೋನಾರ ಬೊದ್‌ಕ್ ಎಲ್ಲವುಕೂ ಮಾದರಿ ಅಂತ ಹೇಳ್ದೊ. ಜಂಬರದ ಇನ್ನೊಬ್ಬ ನೆಂಟ್ರ್‌ಗ ಆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಾಜ

ವರದಿ : ಕಲಾಸ್ಪಂದನ ವೇದಿಕೆಂದ ಅರೆಭಾಷೆ ಉಪನ್ಯಾಸ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಮತ್ತೆ ಕಲಾ ಸ್ಪಂದನ ವೇದಿಕೆ ಇದರ ಕೂಡ್‌ಕಟ್ಟ್‌ಲಿ ಜುಲೈ ತಿಂಗ 14 ಕ್ಕೆ ಮದ್ಯಾಹ್ನ ಎರಡ್ ಗಂಟೆಂದ ಮೂರ್ ಗಂಟೆಮುಟ್ಟ ಗೂಗಲ್ ಮೀಟ್‌ಲಿ "ಲಾಕ್‌ಡೌನ್ ಸಮಯದಲ್ಲಿ ಒಂದಷ್ಟು ವಿಚಾರ ವಿನಿಮಯ" ಕಾರ್ಯಕ್ರಮ ನಡ್ತ್. ಇದರ್‌ಲಿ ಅರೆಭಾಷೆಗೆ ಸಂಬಂದಿಸಿದ ಹಾಂಗೆ ಉಪನ್ಯಾಸ ಏರ್ಪಡಿಸಿದ್ದೊ. ಅರೆಭಾಷೆ ಸಂ. ಮ. ಸಾ. ಸಂಘ ಇದರ ಕಾರ್ಯದರ್ಶಿ ಅಭಿಜಿತ್ ಕೆ ಜೆ ಅವು "ಅರೆಭಾಷೆ ಮತ್ತು ಆಧುನಿಕತೆ" ವಿಷಯದ ಬಗ್ಗೆ ಮಾತನಾಡ್‌ದೊ. ಸಂಘದ ಉಪಾದ್ಯಕ್ಷೆ ಧನ್ಯಶ್ರೀ ಕೆ ಅವು "ಅರೆಭಾಷೆ ಸಾಹಿತ್ಯ ಮತ್ತು ಆಚರಣೆ" ಬಗ್ಗೆ ವಿವರಿಸಿದೊ. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮೋನಿತ ಓ ಜಿ ಅವು ಅರೆಭಾಷೆ ಸಂಸ್ಕೃತಿನ ಬಗ್ಗೆ ವಿವರಣೆ ಕೊಟ್ಟೊ. ನಮ್ಮ ಕಾಲೇಜ್‌ನ ಮಕ್ಕ, ಲೆಕ್ಚರರ್‌ಗ ಸೇರಿ 35 ಜನ ಕಾರ್ಯಕ್ರಮಲಿ ಬಾಗವಹಿಸಿದ್ದೊ. ಕಾಲೇಜ್‌ನ ಬಿ.ಎ ವಿದ್ಯಾರ್ಥಿಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿ ಕೊಟ್ಟ್ ಸಹಕರಿಸಿದೊ. ಈ ಲೋಕ್‌ಡೌನ್ ಸಮಯಲಿ ಕಲಾಸ್ಪಂದನ ವೇದಿಕೆನ ವತಿಂದ ನಡ್ಸಿದ ಒಂಬತ್ತನೇ ಸರಣಿ ಕಾರ್ಯಕ್ರಮ ಇದಾಗಿತ್ತ್.

ಪರಿಸರ ದಿನ ವಿಶೇಷ ಅರೆಭಾಷೆ ರಸಪ್ರಶ್ನೆನ ವರದಿ

ಪರಿಸರ ದಿನದ ಲೆಕ್ಕಲಿ ನಮ್ಮ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಬಗೆಂದ ನಮ್ಮ ಅರೆಭಾಷೆ ಸಂಘದ ಸಂಚಾಲಕರ್ ಮತ್ತೆ ಕನ್ನಡ ವಿಭಾಗದ ಉಪನ್ಯಾಸಕರ್ ಆದ ಶ್ರೀ ಸಂಜೀವ ಕುದ್ಪಾಜೆ ಅವರ ಮಾರ್ಗದರ್ಶನ, ನಮ್ಮ ಕಾಲೇಜ್‌ನ ಪ್ರಾಂಶುಪಾಲರ್ ಆದ ಡಾ. ಪೂವಪ್ಪ ಕಣಿಯೂರು ಅವರ ಸಹಕಾರ, ಅನುಮತಿಂದ ಜೂನ್ 5 ರ್‌ಂದ ಜೂನ್ 7 ರವೆಗೆ ನಾವ್ ಒಂದ್ ಡಿಜಿಟಲ್ ರಸಪ್ರಶ್ನೆ ಕಾರ್ಯಕ್ರಮ ನಡ್ಸಿದೊ. ಮೂರು ದಿನಲಿ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಮೈಸೂರು, ಹಾಸನ, ಬೆಂಗಳೂರು ಸೇರ್‌ದ ಹಾಂಗೆ 6 ಜಿಲ್ಲೆಂದ ಜಾತಿ, ಮತ, ಬಾಷೆ, ಜಾಗೆ ಹಿಂಗೆ ಯಾವ ವೆತ್ಯಾಸ ಇಲ್ಲದೆ ಸುಮಾರ್ 132 ಜನ ಈ ಡಿಜಿಟಲ್ ರಸಪ್ರಶ್ನೆಲಿ ಬಾಗವಹಿಸಿದೊ.  ಈ ರಸಪ್ರಶ್ನೆಲಿ ನಾವು ಒಟ್ಟ್ ಹತ್ತ್ ಪ್ರಶ್ನೆ ಹಾಕಿದ್ದೊ. ಅದರ್‌ಲಿ ಮೊದಲ್‌ನ ಐದ್ ಪ್ರಶ್ನೆಗ ಪರಿಸರದ ಬಗ್ಗೆ, ಬಾಕಿ ಐದ್ ಪ್ರಶ್ನೆ ಅರೆಭಾಷೆ ಬಗ್ಗೆ ಇತ್ತ್. ಬಾಗವಹಿಸಿದ 132 ಜನರ ಸರಾಸರಿ ಮಾರ್ಕ್ 7.4 ( ಹತ್ತರ್‌ಲಿ ). 27 ಜನ ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟೊಳೊ. ರಸಪ್ರಶ್ನೆಲಿ ಬಾಗವಹಿಸಿದವು 5 ರ್‌ಲಿ 4.4 ರೇಟಿಂಗ್ ಕೊಟ್ಟ್ ನಮ್ಮ ಸಣ್ಣ ಪ್ರಯತ್ನನ ಬೆಂಬಲಿಸಿಯಳೊ. ರಸಪ್ರಶ್ನೆಲಿ ಬಾಗವಹಿಸಿದ ಹೆಚ್ಚಿನವ್ ತಿಳ್ಸಿದ ಸಲಹೆ / ಅಭಿಪ್ರಾಯಗಳ ಒಟ್ಟ್ ಸಾರ. • ಪ್ರಶ್ನೆ ಇನ್ನ್ ಕೂಡ ಜಾಸ್ತಿ ಸೇರ್‌ಸಕಯಿತ್. • ಒಳ್ಳ ಅನುಭವ ಸಿಕ್ಕಿತ್. • ಅರೆಭಾಷೆನ ಕತೆ, ಕವನಗಳ ಬಗ್ಗೆ ಪ್ರಶ್ನೆ ಸೇರ್‌ಸಕಯಿತ್ • ಸುಮಾರ್ ಹೊಸ ವಿಷಯ ಗೊತ್ತಾತ್ • ರ

ಪರಿಸರ ದಿನ - ಅರೆಭಾಷೆ ರಸಪ್ರಶ್ನೆ

ನೆಹರು ಮೆಮೋರಿಯಲ್ ಕಾಲೇಜು, ಕುರುಂಜಿಭಾಗ್, ಸುಳ್ಯ, ದ.ಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ನಮಸ್ತೆ, 🌱 ನಮ್ಮ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಲೆಕ್ಕಲಿ ವಿಶ್ವ ಪರಿಸರದ ದಿನದ ಬಾಗ ಆಗಿ ಪರಿಸರ ದಿನ ವಿಶೇಷ ಅರೆಭಾಷೆ ರಸಪ್ರಶ್ನೆ ಆನ್‌ಲೈನ್‌ಲಿ ತಯಾರಿಸಿಯಾಳ್ದ್. 2021 ಜೂನ್ 5 ರ್‌ಂದ ಬೊಳ್‌ಪಿಗೆ 09.00 ಗಂಟೆಂದ 2021 ಜೂನ್ 7 ರಂದ್ ರಾತ್ರೆ 09.00 ಗಂಟೆವರೆಗೆ ಯಾಗ ಬೇಕಾರೆ ನೀವ್‌ಗೆ ಇದರ್‌ಲಿ ಬಾಗವಹಿಸಕ್. ಇದರ್‌ಲಿ ಒಟ್ಟು ಹತ್ತ್ ಪ್ರಶ್ನೆ ಉಟ್ಟು. ಐದ್ ಅಥವಾ ಜಾಸ್ತಿ ಸರಿ ಉತ್ತರ ಕೊಟ್ಟರೆ ನೀವುಗೆ ಡಿಜಿಟಲ್ ಸರ್ಟಿಫಿಕೇಟ್ ಸಿಕ್ಕುದು. ಕೆಳಗೆ ಕೊಟ್ಟ ಲಿಂಕ್ ಒತ್ತಿರೆ ನೀವ್‌ಗೆ ಈ ರಸಪ್ರಶ್ನೆಲಿ ಉಚಿತ ಆಗಿ ಬಾಗವಹಿ‌ಸಕ್. ನೀವು ಇದರ್‌ಲಿ ಬಾಗವಹಿಸಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳ್‌ಸಿ ಅಂತ ನಾವು ಕೇಳಿಕಂಡವೆ. https://nmc-arebhashe.blogspot.com/p/quiz.html ಪ್ರೀತಿ, ಗೌರವಂದ ಡಾ. ಪೂವಪ್ಪ ಗೌಡ ಕೆ ಪ್ರಾಂಶುಪಾಲರ್, ಎನ್ನೆಂಸಿ ಸುಳ್ಯ ಶ್ರೀ ಸಂಜೀವ ಕುದ್ಪಾಜೆ ಸಂಚಾಲಕರ್, ಅರೆಭಾಷೆ ಸಂ. ಮ. ಸಾ. ಸಂಘ ಅಧ್ಯಕ್ಷರ್ / ಕಾರ್ಯದರ್ಶಿ ಎಲ್ಲಾ ಪದಾಧಿಕಾರಿಗ ಅರೆಭಾಷೆ ಸಂ. ಮ. ಸಾ. ಸಂಘ

🎨 ಚಿತ್ರ : ಹಂಸ 🦢

Image
  || ಚಿತ್ರ ಬುಡ್‌ಸಿದ್ : ಚರೀಷ್ಮ.ಪಿ.ಡಿ ||

ದೀಪ...

Image
||  ✍️   ಧನ್ಯಶ್ರೀ ಕಳಗಿ ||  ಅಂದ್  ಇದರ ಬೆಳ್ಕ್ ಲೇ ಇಡೀ ಮನೆ ಬೆಳ್ಗ್ ತಿತ್ತ್..  ಇದರ ಬೆಳ್ಕ್ ಲೇ ಸಾಲೆನ ನೋಟ್ಸ್ ಗಳ ಬರೆತಿದ್ದ ದಿನೊಗ ಇದ್ದ. ಅದರೆ ಈಗ ಈ ಸೋಲಾರ್, ಕರೆಂಟ್ ನ ಕಣ್ಣುಕುಕ್ಕುವಂತ ಬೆಳ್ಕ್ ಲಿ ಈ ದೀಪದ ಬೆಳ್ಕ್ ನಮ್ಮ ಕಣ್ಣಿಗೆ ಹಿಡ್ಸುದುಲೆ. ನಾವು ಎಷ್ಟೋ ವೊಸ೯ದ ಮೇಲೆ ಮತ್ತೆ ಈ ಬೆಳ್ಕ್ ಲಿ ಕುದ್ದೊಳ..🙂ನೀವು ಏನೇ ಹೇಳಿ..ಈ ದೀಪದ ಬೆಳ್ಕೇ   ಶಾಶ್ವತ, ಹಂಗೆನೆ ನಮ್ಮ ಮನ್ಸಿಗು ಹಿತ  ಅಲಾ.. 😊 ಚಿತ್ರ ಕೃಪೆ: ಗೂಗಲ್

ಮಳೆಲಿ ನೆನೆಕುತ ಆಸೆ

Image
||  ✍️  ಲತಾಶ್ರೀ.ಡಿ ||  ಬಾನುಲಿ ಗುಡುಗು, ಮಿಂಚು ಬರ್‌ತಾ ಉಟ್ಟು ಮೇಯಕೆ ಬುಟ್ಟ ದನಂಗ, ಕರುಗ ಎಲ್ಲ ಬಂದು ಒಮ್ಮೆಲೆ ಹಟ್ಟಿ ಸೇರಿಕಂಡ ದೈಯಿಗಳ ಎಲೆಗ, ಗೆಲ್ಲುಗ ಎಲ್ಲ ಮನೆ ಜಾಲಿಗೆ ಬಂದು ಬಿದ್ದುಟು ಹೂ ದೈಯಿಗ ಬಾಗಿ ಬೀಳಿಕೆ ರೆಡಿ ಆಗುಟು ನಾ ಓಡಿ ಹೋಗಿ ಹೂ ದೈಯಿಗೆ ಗೂಟ ಹೊಡ್ದು ಸರಿ ಮಾಡೋಕುತ ಹೊರ್‌ಡಕನ ಒಂದು ಸಿಡ್‌ಲ್‌ ಹೊಡ್‌ದತು ನಾ ಓಡಿ ಬಂದು ಅ ದೈನ ಹಕ್ಕಲೆ ಕುದ್ದ್‌ಕಂಡೆ ಮಳೆ ಬಾಕನ ಮಳೆಲಿ ಚಂಡಿ ಆಗಿ ಕುಣಿಕುತ ಆಸೆ ಮತ್ತೆ ಅಯ್ಯೆನ ಬಾಯಿಂದ ಬೈಗೊಳು ತಿಂಬ ಕೆಲ್ಸ ಆಕಿಲೆ ಮತ್ತೆ ಉಗ್ಗವ್ವನಂಗೆ ಕೆಮ್ಮಿಕಂಡ್‌ ಇರಕಲೆ? ಇದು ನನ್ನ ಅಯ್ಯೆನ ಬೊಯೆದು ಒಳ್ಳ ಮಳೆ ಹೊಯೆತ ಉಟ್ಟು, ಆಸೆ ಆದೇ ಜಾಲಿಗೆ ಇಳೆಕುತ..... ಅಯ್ಯೆ ಬೋಯ್ದದೆತ ಹೆದ್ರಿಕೆ ಆದೇ... ಅಯ್ಯೆ ಮಗ ಚಂಡಿ ಆದು ಬೇಡತ ಅಡಿಗೆ ಕೋಣೆಗೆ ಹೋಗಿ, ಒಲೆಲಿದ್ದ ಕೆಂಡಕ್ಕೆ ಬೀಜ ಹಾಕಿ ನನ್ನ ಕರ್‌ದದೆ..... ಬಾ ಮಗ ಒಂದು ಗುಟ್ಟು ಗೊಟ್ಟನೇ... ಬೇಗ ಬಾ..ತ... ಆದರೂ ಅಯ್ಯೆನ ಆಸೆ ಮಗ ಮಳೆಗೆ ಚಂಡಿ ಆಕೆ ಬೊತ್ತುತಾ... ನಾವ್ಗೆ ಹುಷರಿಲ್ಲದಾಕನ, ಅಯ್ಯೆ ನಮ್ಮ ಬುಟ್ಟು ಎಲ್ಲಿಗೂ ಹೋಕಿಲೆ... ಅಯ್ಯೆ ನಮ್ಮ ಲಾಯ್ಕಿ ನೋಡಿಕಂಡದೆ ಇದರ್‌ಲಿ ನಮ್ಮ ಅಯ್ಯೆನ ಪಾತ್ರ ಹೇಳಿಕೆ ನಾವ್ಗೆ ಬಾಯಿಯೇ ಬಾಕಿಲೆ ಚಿತ್ರ ಕೃಪೆ : ಗೂಗಲ್

ಅರೆಭಾಷೆ ಅಂದ್-ಇಂದ್-ನಾಳೆ

Image
|| ✍️ ಅಭಿಜಿತ್ ಕೆ ಜೆ ||  ನಮ್ಮ ಭಾರತ ಸಾವಿರದಷ್ಟ್ ಭಾಷೆಗಳ ಆಸ್ತಿ ಇರುವ ದೇಶ. ನಮ್ಮ ದೇಶಲಿ ಜಗತ್ತ್‌ನ ಯಾವ ದೇಶಲಿ ಕೂಡ ಕಾಂಬಕೆ ಆಗದಷ್ಟ್ ಸಂಖ್ಯೆಲಿ ಬೇರೆ ಬೇರೆ ಭಾಷೆಗ ಉಟ್ಟು. ಎಷ್ಟೋ ಭಾಷೆಗ ಕಾಲದೊಟ್ಟಿಗೆ ಕಾಲ್ ಇಸಿ ನಡಿಯಕೆ ಆಗದೆ ಮಣ್ಣ್ ಮುಚ್ಚಿ ಹೋಗುಟು. 2011 ರ ಜನಗಣತಿನ ಹಾಂಗೆ ನಮ್ಮ ದೇಶಲಿ 122 ಪ್ರದಾನ ಭಾಷೆ ಮತ್ತೆ 1599 ಇತರ ಭಾಷೆ ಉಟ್ಟುಗಡ.       ಭಾಷೇಂತ ಹೇಳ್ದು ಹಳ್ಳದ ನೀರ್‌ನ ಹಾಂಗೆ. ಅದಿಕ್ಕೆ ಸರಿಯಾದ ಆದಿಮೂಲ ಅಂತ ಇಲ್ಲೆ. ಕಾಲಕಾಲಕ್ಕೆ ಹೊಂದಿಕಂಡ್ ಏರ್-ತಗ್ಗ್‌ಗಳ್ ಇದ್ದೇ ಇದ್ದದೆ‌. ಅರೆಗಾಲಲಿ ಹಳ್ಳ ಒಣ್‌ಗಿದ ಹಾಂಗೆ ಆದೆ‌. ಮಳೆಗಾಲ ಬಂದ ಹಾಂಗೆ ಆ ಹಳ್ಳ ಅದರ ಮಿತಿ ಮೀರಿಕಂಡ್ ಹರ‌್ದದೆ... ಆಚೀಚೆ ಇದ್ದ ಚೋಡಿಗಳ್‌ಂದ, ಕೆರೆಗಳ್‌ಂದ ಎಲ್ಲಾ ನೀರ್ ಬಂದ್ ಸೇರ್‌ದೆ. ಹಳ್ಳ ಕೆಲವು ದಿಕ್ಕಿಗೆ ಎತ್ತ್‌ಕನ ನೀರ್ ಪಾಲ್ ಆಗಿ ಬೇರೆ ಬೇರೆ ದಿಕ್ಕಿಗೆನೂ ಹರ್‌ದ್‌ಕಂಡ್ ಹೋದೆ. ಕೊನೆಗೆ ಆ ಹಳ್ಳದ ನೀರ್ ಎತ್ತುದು ಕಡಲ್‌ಗೆ. ಎಲ್ಲಾ ಭಾಷೆನೂ ಹಂಗೆ... ಒಂದೊಂದ್ ಕಾಲಲಿ ಭಾಷೆನ ಆಸ್ತಿ ಹೆಚ್ಚ್‌ತಾ ಹೋದೆ. ಕೆಲವು ಕಾಲಲಿ ಆ ಭಾಷೆ ಅದರ ಅವನತಿನ ಕಡೆಗೆ ಹೋದೆ. ಕೆಲವೊಮ್ಮೆ ಭಾಷೆಗ ಬೇರೆ ಸೋದರ ಭಾಷೆನೊಟ್ಟಿಗೆ ಸೇರಿಕಂಡ್ ಅದರ ಅಸ್ತಿತ್ವನ ಉಳ್‌ಸಿಕೆ ಪ್ರಯತ್ನಿಸಿಕಂಡದೆ, ಇಲ್ಲರೆ, ಕೆಲವು ಸರ್ತಿ ಬೇರೆ ಭಾಷೆಗಳ ಪದ ಸಂಪತ್ತ್‌ನ ತಕಂಡ್‌ ಅದರ್‌ಲಿ ಕೂಡಿ ಬೆಳ್‌ದದೆ.      ಅರೆಭಾಷೆ ಅಂತ ಹೇಳ್‌ರೆ ಇಂದ್‌ನ ದಕ್ಷಿಣ ಕನ್ನಡ, ಕೊಡಗ್

ಹಿಂದೆ ತಿರ್ಗಿ ನೋಡ್ಕನ ಕಂಡ ನೆನಪುಗಳ್...

Image
|| ✍️ ಮೋನಿತ.ಓ.ಜಿ ||  ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ ನಾ ಹುಟ್ಟಿ ಬೆಳ್ದ ಉಲುಗೂಲಿ ಗ್ರಾಮ ಅರೆಬಾಸೆಲೇ ಆಡಿ ಪಾಡಿ ಕಲ್ತ ಈ ಶಾಲೆ ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ ರಾಜ್ ಮಾಸ್ಟ್ರ ರಾಮಾಯಣ ಪದ್ಯ ಚೆರಿಯಮನೆ ಮೀನಾಕ್ಷಿ ಟೀಚರ ಆನೆ ಬಾತು ಊರಿಗೆ ಪಾಂಡಿ ಚಂದ್ರಶೇಖರ್ ಮೇಸ್ಟ್ರ ಕಾರಿನ ಶಬ್ದ ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ... ಬೆಣ್ಣೆ ಕಡ್ಡಿನ, ಚಡ್ಡಿ ಜೋಬುಂದ ತೆಗ್ದ್ ಬರೆತಿದ್ದದ್ ಸ್ಲೇಟ್‌ಲಿ, ಅಕ್ಷರ, ಮಗ್ಗಿ, ಕೂಡಿ ಕಳ್ದ್ ಲೆಕ್ಕ ಮಾಡ್ತಿದ್ದದ್ ನೀರ್ ಕಡ್ಡಿ ಉಜ್ಜಿ, ಎಂಜಲ್ ಹಾಕಿ ಅದರ‌್ನ ತಿಕ್ಕುತಿದ್ದದ್ ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ... ಜೀಪು-ಲಾರಿ ಒಮ್ಮೊಮ್ಮೆ ಕೆಳಗೆ ದಾರಿಲಿ ಓಡಾಡ್ತಿದ್ದದ್ ಯಾಗರ್ ಒಮ್ಮೆ ಯಿಮಾನ ಆಕಾಶಲಿ ಹಾರ‌್ತಿದ್ದದ್ ಆಗ ಕೂಗು ಹಾಕಿ, ನಾವೆಲ್ಲ ಟಾಟಾ ಮಾಡ್ತದ್ದದ್ ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ... ಕಳ್ಳ-ಪೋಲಿಸ್, ಲಗೋರಿ, ಬೆರ‌್ಸುವ ಆಟ ಕುಂಟಬಿಲ್ಲೆ, ಚಿಲ್‌ತಿ ಲಗೋರಿ ಆಟ ನಿಂಬುಳಿ ಹಿಂಡಿ ಅದರ ತಿಂಬೋ ಮಜಾ ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ... ಚಿತ್ರ ಕೃಪೆ : ಗೂಗಲ್

ಕತ್ತಲೆ ದಾರಿ

Image
|| ✍️ ಕಾವ್ಯ ಕಲ್ಲುಗದ್ದೆ ||  

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *