ಪರಿಸರ ದಿನ ವಿಶೇಷ ಅರೆಭಾಷೆ ರಸಪ್ರಶ್ನೆನ ವರದಿ

ಪರಿಸರ ದಿನದ ಲೆಕ್ಕಲಿ ನಮ್ಮ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಬಗೆಂದ ನಮ್ಮ ಅರೆಭಾಷೆ ಸಂಘದ ಸಂಚಾಲಕರ್ ಮತ್ತೆ ಕನ್ನಡ ವಿಭಾಗದ ಉಪನ್ಯಾಸಕರ್ ಆದ ಶ್ರೀ ಸಂಜೀವ ಕುದ್ಪಾಜೆ ಅವರ ಮಾರ್ಗದರ್ಶನ, ನಮ್ಮ ಕಾಲೇಜ್‌ನ ಪ್ರಾಂಶುಪಾಲರ್ ಆದ ಡಾ. ಪೂವಪ್ಪ ಕಣಿಯೂರು ಅವರ ಸಹಕಾರ, ಅನುಮತಿಂದ ಜೂನ್ 5 ರ್‌ಂದ ಜೂನ್ 7 ರವೆಗೆ ನಾವ್ ಒಂದ್ ಡಿಜಿಟಲ್ ರಸಪ್ರಶ್ನೆ ಕಾರ್ಯಕ್ರಮ ನಡ್ಸಿದೊ. ಮೂರು ದಿನಲಿ ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು, ಮೈಸೂರು, ಹಾಸನ, ಬೆಂಗಳೂರು ಸೇರ್‌ದ ಹಾಂಗೆ 6 ಜಿಲ್ಲೆಂದ ಜಾತಿ, ಮತ, ಬಾಷೆ, ಜಾಗೆ ಹಿಂಗೆ ಯಾವ ವೆತ್ಯಾಸ ಇಲ್ಲದೆ ಸುಮಾರ್ 132 ಜನ ಈ ಡಿಜಿಟಲ್ ರಸಪ್ರಶ್ನೆಲಿ ಬಾಗವಹಿಸಿದೊ. 


ಈ ರಸಪ್ರಶ್ನೆಲಿ ನಾವು ಒಟ್ಟ್ ಹತ್ತ್ ಪ್ರಶ್ನೆ ಹಾಕಿದ್ದೊ. ಅದರ್‌ಲಿ ಮೊದಲ್‌ನ ಐದ್ ಪ್ರಶ್ನೆಗ ಪರಿಸರದ ಬಗ್ಗೆ, ಬಾಕಿ ಐದ್ ಪ್ರಶ್ನೆ ಅರೆಭಾಷೆ ಬಗ್ಗೆ ಇತ್ತ್. ಬಾಗವಹಿಸಿದ 132 ಜನರ ಸರಾಸರಿ ಮಾರ್ಕ್ 7.4 ( ಹತ್ತರ್‌ಲಿ ). 27 ಜನ ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟೊಳೊ. ರಸಪ್ರಶ್ನೆಲಿ ಬಾಗವಹಿಸಿದವು 5 ರ್‌ಲಿ 4.4 ರೇಟಿಂಗ್ ಕೊಟ್ಟ್ ನಮ್ಮ ಸಣ್ಣ ಪ್ರಯತ್ನನ ಬೆಂಬಲಿಸಿಯಳೊ.


ರಸಪ್ರಶ್ನೆಲಿ ಬಾಗವಹಿಸಿದ ಹೆಚ್ಚಿನವ್ ತಿಳ್ಸಿದ ಸಲಹೆ / ಅಭಿಪ್ರಾಯಗಳ ಒಟ್ಟ್ ಸಾರ.


• ಪ್ರಶ್ನೆ ಇನ್ನ್ ಕೂಡ ಜಾಸ್ತಿ ಸೇರ್‌ಸಕಯಿತ್.

• ಒಳ್ಳ ಅನುಭವ ಸಿಕ್ಕಿತ್.

• ಅರೆಭಾಷೆನ ಕತೆ, ಕವನಗಳ ಬಗ್ಗೆ ಪ್ರಶ್ನೆ ಸೇರ್‌ಸಕಯಿತ್

• ಸುಮಾರ್ ಹೊಸ ವಿಷಯ ಗೊತ್ತಾತ್

• ರಸಪ್ರಶ್ನೆಗೆ ಸಮಯ ಮಿತಿ ಕೂಡ ಬೇಕಿತ್ತ್

• ಅರೆಭಾಷೆ ರಸಪ್ರಶ್ನೆ ಕಾರ್ಯಕ್ರಮ ಇನ್ನ್ ಕೂಡ ಮಂದುವರ್‌ಸಕು. 


ನಾವ್‌ಗೆ ಸುಮಾರ್ ಪ್ರತಿಕ್ರಿಯೆ ಸಿಕ್ಕಿತ್. ಎಲ್ಲವೂ ಕೂಡ ನಮ್ಮ ಈ ಡಿಜಿಟಲ್ ರಸಪ್ರಶ್ನೆನ ಬಗ್ಗೆ ಒಳ್ಳ ಅಭಿಪ್ರಾಯ ಕೊಟ್ಟೊ. ಮುಂದಿನ ಸರ್ತಿ ಇದ್‌ಕಿಂತ ಲಾಯ್ಕಿಲಿ ಸಂಘದ ಕಾರ್ಯಕ್ರಮ ನಡ್ಸಿಕೆ ಆದು ಅಂತ ನಮ್ಮ ನಂಬಿಕೆ.

ಎಲ್ಲರ ಪ್ರೀತಿ, ಸಹಕಾರ, ಆಶಿರ್ವಾದಕ್ಕೆ ಧನ್ಯವಾದಗ


ಪ್ರೀತಿ, ಗೌರವಂದ...

ಅಧ್ಯಕ್ಷ / ಕಾರ್ಯದರ್ಶಿ ಮತ್ತೆ ಎಲ್ಲಾ ಪದಾಧಿಕಾರಿಗ

ಅರೆಭಾಷೆ ಸಂ. ಮ.‌ ಸಾ. ಸಂಘ.

Comments

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ