|| ✍️ ಲತಾಶ್ರೀ.ಡಿ || ಬಾನುಲಿ ಗುಡುಗು, ಮಿಂಚು ಬರ್ತಾ ಉಟ್ಟು ಮೇಯಕೆ ಬುಟ್ಟ ದನಂಗ, ಕರುಗ ಎಲ್ಲ ಬಂದು ಒಮ್ಮೆಲೆ ಹಟ್ಟಿ ಸೇರಿಕಂಡ ದೈಯಿಗಳ ಎಲೆಗ, ಗೆಲ್ಲುಗ ಎಲ್ಲ ಮನೆ ಜಾಲಿಗೆ ಬಂದು ಬಿದ್ದುಟು ಹೂ ದೈಯಿಗ ಬಾಗಿ ಬೀಳಿಕೆ ರೆಡಿ ಆಗುಟು ನಾ ಓಡಿ ಹೋಗಿ ಹೂ ದೈಯಿಗೆ ಗೂಟ ಹೊಡ್ದು ಸರಿ ಮಾಡೋಕುತ ಹೊರ್ಡಕನ ಒಂದು ಸಿಡ್ಲ್ ಹೊಡ್ದತು ನಾ ಓಡಿ ಬಂದು ಅ ದೈನ ಹಕ್ಕಲೆ ಕುದ್ದ್ಕಂಡೆ ಮಳೆ ಬಾಕನ ಮಳೆಲಿ ಚಂಡಿ ಆಗಿ ಕುಣಿಕುತ ಆಸೆ ಮತ್ತೆ ಅಯ್ಯೆನ ಬಾಯಿಂದ ಬೈಗೊಳು ತಿಂಬ ಕೆಲ್ಸ ಆಕಿಲೆ ಮತ್ತೆ ಉಗ್ಗವ್ವನಂಗೆ ಕೆಮ್ಮಿಕಂಡ್ ಇರಕಲೆ? ಇದು ನನ್ನ ಅಯ್ಯೆನ ಬೊಯೆದು ಒಳ್ಳ ಮಳೆ ಹೊಯೆತ ಉಟ್ಟು, ಆಸೆ ಆದೇ ಜಾಲಿಗೆ ಇಳೆಕುತ..... ಅಯ್ಯೆ ಬೋಯ್ದದೆತ ಹೆದ್ರಿಕೆ ಆದೇ... ಅಯ್ಯೆ ಮಗ ಚಂಡಿ ಆದು ಬೇಡತ ಅಡಿಗೆ ಕೋಣೆಗೆ ಹೋಗಿ, ಒಲೆಲಿದ್ದ ಕೆಂಡಕ್ಕೆ ಬೀಜ ಹಾಕಿ ನನ್ನ ಕರ್ದದೆ..... ಬಾ ಮಗ ಒಂದು ಗುಟ್ಟು ಗೊಟ್ಟನೇ... ಬೇಗ ಬಾ..ತ... ಆದರೂ ಅಯ್ಯೆನ ಆಸೆ ಮಗ ಮಳೆಗೆ ಚಂಡಿ ಆಕೆ ಬೊತ್ತುತಾ... ನಾವ್ಗೆ ಹುಷರಿಲ್ಲದಾಕನ, ಅಯ್ಯೆ ನಮ್ಮ ಬುಟ್ಟು ಎಲ್ಲಿಗೂ ಹೋಕಿಲೆ... ಅಯ್ಯೆ ನಮ್ಮ ಲಾಯ್ಕಿ ನೋಡಿಕಂಡದೆ ಇದರ್ಲಿ ನಮ್ಮ ಅಯ್ಯೆನ ಪಾತ್ರ ಹೇಳಿಕೆ ನಾವ್ಗೆ ಬಾಯಿಯೇ ಬಾಕಿಲೆ ಚಿತ್ರ ಕೃಪೆ : ಗೂಗಲ್
👌👌👌
ReplyDelete