ಅರೆಭಾಷೆ ಅಂದ್-ಇಂದ್-ನಾಳೆ

|| ✍️ ಅಭಿಜಿತ್ ಕೆ ಜೆ || 

ನಮ್ಮ ಭಾರತ ಸಾವಿರದಷ್ಟ್ ಭಾಷೆಗಳ ಆಸ್ತಿ ಇರುವ ದೇಶ. ನಮ್ಮ ದೇಶಲಿ ಜಗತ್ತ್‌ನ ಯಾವ ದೇಶಲಿ ಕೂಡ ಕಾಂಬಕೆ ಆಗದಷ್ಟ್ ಸಂಖ್ಯೆಲಿ ಬೇರೆ ಬೇರೆ ಭಾಷೆಗ ಉಟ್ಟು. ಎಷ್ಟೋ ಭಾಷೆಗ ಕಾಲದೊಟ್ಟಿಗೆ ಕಾಲ್ ಇಸಿ ನಡಿಯಕೆ ಆಗದೆ ಮಣ್ಣ್ ಮುಚ್ಚಿ ಹೋಗುಟು. 2011 ರ ಜನಗಣತಿನ ಹಾಂಗೆ ನಮ್ಮ ದೇಶಲಿ 122 ಪ್ರದಾನ ಭಾಷೆ ಮತ್ತೆ 1599 ಇತರ ಭಾಷೆ ಉಟ್ಟುಗಡ. 

    ಭಾಷೇಂತ ಹೇಳ್ದು ಹಳ್ಳದ ನೀರ್‌ನ ಹಾಂಗೆ. ಅದಿಕ್ಕೆ ಸರಿಯಾದ ಆದಿಮೂಲ ಅಂತ ಇಲ್ಲೆ. ಕಾಲಕಾಲಕ್ಕೆ ಹೊಂದಿಕಂಡ್ ಏರ್-ತಗ್ಗ್‌ಗಳ್ ಇದ್ದೇ ಇದ್ದದೆ‌. ಅರೆಗಾಲಲಿ ಹಳ್ಳ ಒಣ್‌ಗಿದ ಹಾಂಗೆ ಆದೆ‌. ಮಳೆಗಾಲ ಬಂದ ಹಾಂಗೆ ಆ ಹಳ್ಳ ಅದರ ಮಿತಿ ಮೀರಿಕಂಡ್ ಹರ‌್ದದೆ... ಆಚೀಚೆ ಇದ್ದ ಚೋಡಿಗಳ್‌ಂದ, ಕೆರೆಗಳ್‌ಂದ ಎಲ್ಲಾ ನೀರ್ ಬಂದ್ ಸೇರ್‌ದೆ. ಹಳ್ಳ ಕೆಲವು ದಿಕ್ಕಿಗೆ ಎತ್ತ್‌ಕನ ನೀರ್ ಪಾಲ್ ಆಗಿ ಬೇರೆ ಬೇರೆ ದಿಕ್ಕಿಗೆನೂ ಹರ್‌ದ್‌ಕಂಡ್ ಹೋದೆ. ಕೊನೆಗೆ ಆ ಹಳ್ಳದ ನೀರ್ ಎತ್ತುದು ಕಡಲ್‌ಗೆ. ಎಲ್ಲಾ ಭಾಷೆನೂ ಹಂಗೆ... ಒಂದೊಂದ್ ಕಾಲಲಿ ಭಾಷೆನ ಆಸ್ತಿ ಹೆಚ್ಚ್‌ತಾ ಹೋದೆ. ಕೆಲವು ಕಾಲಲಿ ಆ ಭಾಷೆ ಅದರ ಅವನತಿನ ಕಡೆಗೆ ಹೋದೆ. ಕೆಲವೊಮ್ಮೆ ಭಾಷೆಗ ಬೇರೆ ಸೋದರ ಭಾಷೆನೊಟ್ಟಿಗೆ ಸೇರಿಕಂಡ್ ಅದರ ಅಸ್ತಿತ್ವನ ಉಳ್‌ಸಿಕೆ ಪ್ರಯತ್ನಿಸಿಕಂಡದೆ, ಇಲ್ಲರೆ, ಕೆಲವು ಸರ್ತಿ ಬೇರೆ ಭಾಷೆಗಳ ಪದ ಸಂಪತ್ತ್‌ನ ತಕಂಡ್‌ ಅದರ್‌ಲಿ ಕೂಡಿ ಬೆಳ್‌ದದೆ.

    ಅರೆಭಾಷೆ ಅಂತ ಹೇಳ್‌ರೆ ಇಂದ್‌ನ ದಕ್ಷಿಣ ಕನ್ನಡ, ಕೊಡಗ್ ಮತ್ತೆ ಕಾಸರಗೋಡ್ ಜಿಲ್ಲೆಗಳ ಗೌಡ ಜನಾಂಗದವು ಮಾತಾಡುವ ಭಾಷೆ. ಅರೆಭಾಷಿಕರ್ ಕನ್ನಡ ನಾಡ್‌ನ ನಿವಾಸಿಗ ಆದಕಾರಣ ಈ ಭಾಷೆಗೆ ಹೊಸ ಕನ್ನಡ ಭಾಷೆನೊಟ್ಟಿಗೆ ತುಂಬಾ ಹಕ್ಕಲೆನ ಸಂಬಂದ ಉಟ್ಟು. ಅರೆಭಾಷಿಕ ಜನಾಂಗದವು ಕೃಷಿ-ಬೇಸಾಯಲಿ ನಂಬಿಕಂಡ್ ಬಂದವು ಆದಕಾರಣಂದ ಪಂಡ್‌ನ ಕಾಲಲಿ ಅರೆಭಾಷೆಗೆ ಬರವಣಿಗೆ ಅಗತ್ಯ ಇತ್‌ಲೆ ಅಂತ ಅರ್ಥ ಮಾಡಕ್. ಆ ಕಾರಣಂದಾಗಿ ಅರೆಭಾಷೆಗೆ ಸ್ವಂತ ಲಿಪಿ ಇಲ್ಲೆ. ಆದರೆ ಕೂಡ ಇಂದ್ ಅರೆಭಾಷಿಕರ್ ಅರೆಭಾಷೆ ಬರಿವ ಸಂದರ್ಭಲಿ ಕನ್ನಡ ಲಿಪಿನ ಬಳಸ್‌ತಾ ಒಳೊ. ಅರೆಭಾಷೆಗೆ ಕನ್ನಡ ಲಿಪಿನಷ್ಟ್ ಒಳ್ಳ ಲಿಪಿ ಬೇರೆ ಇಲ್ಲೆ. ಲಿಪಿ ಇಲ್ಲೆ ಅಂತ, ಪಂಡ್‌ನ ಕಾಲಲಿ ಅರೆಭಾಷೆಗೆ ಸಾಹಿತ್ಯ ಮತ್ತೆ ಸಂಸ್ಕೃತಿ ಇಲ್ಲೆ ಅಂತ ಹೇಳಿಕೆ ಆಕಿಲ್ಲೆ. ಬೇಸಾಯ ಕೆಲ್ಸ‌ ಮಾಡ್ತಿದ್ದ ಅರೆಭಾಷಿಕ ಗೌಡ ಜನಾಂಗದ ಆದಿಕಾಲಂದಳೇ ಕೃಷಿಗೆ ಸಂಬಂದಿಸಿಕಂಡ್ ಆಚರಿಸ್ತಾ ಇದ್ದ ಮನೆತುಂಬಿಸುದು, ಹೊಸ ಅಕ್ಕಿನ ಊಟ, ದೈವಾರಾಧನೆಗ, ಗುರು-ಕಾರ್ನೋರಿಗೆ ಬಡ್‌ಸಿ ಇಸುವ ಕ್ರಮ, ಮೊದುವೆ ಜಂಬರಲಿ ನಡಿವ ಹಂತ ಹಂತದ ಕ್ರಮಗಳ್, ಮಕ್ಕ ಹುಟ್ಟುವ ಕಾಲದ ಕ್ರಮಗ, ಯಾರಾದರ್ ತೀರಿ ಹೋದರೆ ನಡ್‌ಸುವ ಕ್ರಮಗ, ಹತ್ತು ಕುಟುಂಬದೊಟ್ಟಿಗ್ಗೆ ಇದ್ದ ಸಂಬಂಧ, ೧೮ ಗೋತ್ರದ ವ್ಯವಸ್ಥೆ, ಹಬ್ಬ-ಹರಿದಿನಗ ಹಿಂಗೇ ಲೆಕ್ಕ ಇಲ್ಲದಷ್ಟ್ ಕ್ರಮಗಳ್ ಕಟ್ಟುನಿಟ್ಟ್‌ಲಿ ಆಚರಿಸಿಕಂಡ್ ಬರ್ತಾ ಒಳೊ. ಅದರ ಒಟ್ಟಿಗೆ ಕನ್ನಡ ನಾಡ್ ಮತ್ತೆ ತುಳುನಾಡ್‌ನ ಪಾಲ್‌ನ ಸುಮಾರ್ ಸಂಪ್ರದಾಯಗ ಅರೆಭಾಷೆ ಜನಾಂಗದೊಳಗೆ ಪ್ರಾದೇಶೀಕರಣ ಆಗುಟು. ಒಟ್ಟ್‌ಲಿ ಹೇಳ್‌ರೆ ಅರೆಭಾಷೆ ಸಾಂಸ್ಕೃತಿಕ ತುಂಬಾ ಸಂಪನ್ನ ಆಗಿ ಇತ್ತ್. ಅದಕ್ಕೆ ಹೊಂದಿಕಂಡ್ ಬಾಯಿಂದ ಬಾಯಿಂದ ಬಾಯಿಗೆ ಬೇರೆ ಬೇರೆ ಸಾಹಿತ್ಯ ರಚನೆಗಳ್ ಕೂಡ ಸೃಷ್ಟಿ ಆಗುಟು. ಅದರಲ್ಲಿ ಸೋಬಾನೆ, ಗಾದೆಮಾತ್, ಒಗಟ್, ಬೇಸಾಯದ ಪದ್ಯಗ, ದೇವರ ಪ್ರಾರ್ಥನೆ ಸ್ತುತಿಗ ಹಿಂಗೆ ಸುಮಾರ್ ಉಟ್ಟು. ಅರೆಭಾಷೆಲಿ ಬರವಣಿಗೆ ಇಲ್ಲದ ಕಾರಣಂದ ಹಿಂದ್‌ನ ಕಾಲಲಿ ಅರೆಭಾಷೆ ಸಾಹಿತ್ಯದ ದಾಖಲೀಕರಣ ಆತ್‌ಲೆ ಅಂತ ಮಾತ್ರ.

    ಇಂದ್‌ನ ಆಧುನಿಕ ದಿನಗಳ್‌ಲಿ ಜಗತ್ತ್‌ಲಿ ಇಡೀ ಬಯಂಕರ ಬದಲಾವಣೆ ಕಾಣ್ತಾ ಉಟ್ಟು. ಭಾಷೆ ಮತ್ತೆ ಸಂಸ್ಕೃತಿನ ಶಿಷ್ಟಾಚಾರ ಅಂತ ಹೇಳುವ ಕ್ರಮ ಮಾಯ ಆಗ್ತಾ ಉಟ್ಟು.‌ ಇಂದ್ ಭಾಷೆ ಸಂಸ್ಕೃತಿ ಭಾಗ ಅಲ್ಲ; ಬದಲಾಗಿ ಅದ್ ಲೋಕದೊಟ್ಟಿಗೆ ವ್ಯವಹರಿಸಿಕೆ ಇರುವ ಒಂದು ದಾರಿ ಮಾತ್ರ ಆಗುಟು. ಹಿಂದಿನ ಕಾಲಂದ ಕಾಪಾಡಿಕಂಡ್ ಬಂದ ಭಾಷೆನ ಶುದ್ಧಿ ನಷ್ಟ ಆಗ್ತಾ ಉಟ್ಟು. ಅದ್ ಬರೀ ಅರೆಭಾಷೆಗೆ ಅಂತ ಅಲ್ಲ. ಕನ್ನಡ, ಅರೆಭಾಷೆ ಸೇರ್‌ದ ಹಾಂಗೆ ಎಲ್ಲಾ ಭಾರತೀಯ ಭಾಷೆನ ಮೇಲೆ ಈ ಪರಿಣಾಮ ಕಂಡ್ ಬರ್ತಾ ಉಟ್ಟು. ಪಾರಂಪರಿಕ ಪದಕಟ್ಟ್‌ಗಳ ಬದಲಾಗಿ ಇಂಗ್ಲೀಷ್ ಸೇರ್ದ ಹಾಂಗೆ ಜಾಗತಿಕ ಭಾಷೆಗಳ ಪದಗ ನಮ್ಮ ಭಾಷೆಗಳ್‌ಲಿ ದೊಡ್ಡ ಮಟ್ಟ್‌ಲಿ ಪ್ರಭಾವ ಬೀರ್‌ತಾ ಉಟ್ಟು. ಇಂದ್‌ ಅರೆಭಾಷಿಕರೆಲ್ಲವೂ ಶಿಕ್ಷಣ ವ್ಯವಸ್ಥೆಲಿ ಕನ್ನಡ, ಹಿಂದಿ, ಇಂಗ್ಲೀಷ್ ಸೇರ್ದ ಹಾಂಗೆ ಸುಮಾರು ಭಾಷೆಗಳ ಕೂಡ ಕಲಿತಾ ಒಳೊ. ಹಂಗಾಗಿ ಅರೆಭಾಷೆಲಿ ಈ ಮೂರು ಭಾಷೆಗಳ ಪ್ರಭಾವ ಜಾಸ್ತಿ ಕಂಡು ಬಂದದೆ. ಆದ್ರೆ ಬೇರೆ ಭಾಷೆಗಳ ಪ್ರಭಾವಂದಾಗಿ ಅರೆಭಾಷೆನ ನಾಶ ಆದು ಅಂತ ಹೇಳುವ ವಾದ ತಪ್ಪು. ಏಕೆ ಅಂತ ಹೇಳ್‌ರೆ, ಭಾಷೆ ಮತ್ತೆ ಸಂಸ್ಕೃತಿ ಕಾಲಂದ ಕಾಲಕ್ಕೆ ಸುಧಾರಣೆ ಆಕಂಡ್ ಇದ್ದದೆ. ಅದ್ ಮೊನ್‌ಶಂಗೆ ಬೇಕಾದ ಹಾಂಗೆ ಬದಲಾದೆ. ಅದರ್‌ಂದ ಯಾವ ನಷ್ಟನೂ ಇಲ್ಲೆ. ಉದಾಹರಣೆಗೆ ಕನ್ನಡ ಭಾಷೆ ನಡೆದ್‌ ಬಂದ ದಾರಿ ನೋಡಕ್... ಮೊದಲ್‌ಗೆ ಹಳೆಗನ್ನಡ ಇತ್ತ್. ಮತ್ತೆ ಹಳೆಗನ್ನಡ ಸುಧಾರಣೆ ಆಗಿ ನಡುಗನ್ನಡ ಬಳಕೆಗೆ ಬಾತ್. ಕಾಲ ಕಳ್‌ದ ಹಾಂಗೆ ಈಗ ನಾವು ಹೊಸಗನ್ನಡದ ಕಾಲಲಿ ಒಳೊ. ಈಗ ಕನ್ನಡದ ಮೇಲೆ ದೊಡ್ಡ‌ಮಟ್ಟ್‌ಲಿ ಇಂಗ್ಲೀಷ್ ಪ್ರಭಾವ ಆಗ್ತಾ ಉಟ್ಟು. ಮುಂದಿನ ದಿನಗಳ್‌ಲಿ ಕನ್ನಡದ ಶೈಲಿ ಅಧಿಕೃತ ಆಗಿ ಬದಲಾದರೆ ಕೂಡ ಆಶ್ಚರ್ಯ ಇಲ್ಲೆ. ಹಿಂದೆ ಅರೆಭಾಷಿಕ ಗೌಡ ಜನಾಂಗದ ಮೊದುವೆ ಕಾರ್ಯಕ್ರಮಗ ತಿಂಗಳ್ ಇಡೀ ನಡೀತಾ ಇತ್ತ್ ಅಂತ ಹೇಳುವೆ. ಮೊದುವೆ ನಿಶ್ಚಯ, ಗುರು-ಕಾರ್ನೋರಿಗೆ ಕೊಡುದು, ವೀಳ್ಯೆ ಶಾಸ್ತ್ರ, ಮೊದುರಂಗಿ ಇಸುದು, ಮೊದುವೆ, ತುಪ್ಪ ಹಿಂಗೆ ಸುಮಾರು ಉಟ್ಟಲ. ಆದರೆ ಈಗ ಎರಡ್ ಇಲ್ಲರೆ ಮೂರ್ ದಿನಲಿ ಎಲ್ಲಾ ಸುದಾರ್‌ಸುವೆ. ಕಳೆದ ಒಂದ್ ವರ್ಷಂದ ಕರೋನ ಮಾರಿ ಸುರಾಗಿ ಮೊದುವೆ ಜಂಬರ ಅರ್ಧ ದಿನಲಿ ಮುಗೀತಾ ಉಟ್ಟು. ಇದ್ ಎಲ್ಲನೂ ಕಾಲದ ಕೆಲ್ಸ. ಅದಕ್ಕೆ ನಮ್ಮ ಹಿರಿಯರ್ ಹೇಳ್‌ದು 'ಕಾಲ ಬಂದಾಂಗೆ ಕೋಲ ಕಟ್ಟಕು' ಅಂತ. ಅರೆಭಾಷೆ ಮತ್ತೆ ಕನ್ನಡಸ ಸಂಕಲೆ ಸಂಬಂಧ ಹೇಂಗುಟ್ಟು ಅಂತ ಹೇಳ್‌ರೆ ಮಕ್ಕ ಕನ್ನಡ ಪರೀಕ್ಷೆಲಿ ಅರೆಭಾಷೆ ಬರಿದು, ಅರೆಭಾಷೆ ಮಾತಾಡ್‌ಕನ ಕನ್ನಡ ಬಾದು ಎಲ್ಲಾ ಸಾಮಾನ್ಯ ಅಂತ ಆಗುಟು. ಇಂದ್‌ನ ದಿನಗಳ್‌ಲಿ ನಾಕ್ ಜನ ಮಾತಾಡ್ರೆ ಮಾತ್ರ ಅದೊಂದು ಭಾಷೆ ಅಂತ ಜಗತ್ತ್ ಒಪ್ಪುದುಲ್ಲೆ. ಜಗತ್ತ್ ಬುಡಿ ದೇಶ ಕೂಡ ಒಪ್ಪುದಿಲ್ಲೆ. ಅದಕ್ಕೆ ಒಳ್ಳ ಉದಾಹರಣೆ ಅರೆಭಾಷೆ. ಈ ಭಾಷೆನ ಹೆಸರ್‌ಲೇ 'ಭಾಷೆ' ಅಂತ ಉಟ್ಟು. ಆದರೆ ಇದ್ ಭಾಷೆನೇ ಅಲ್ಲಗಡ‌. ಸತ್ಯ....!! ಜಾಗತಿಕ ಮಟ್ಟಲಿ ಮಾಡ್‌ದ ಒಂದು ಸಮಿತಿ ಜಗತ್ತ್‌ಲಿ ಇರುವ ಎಲ್ಲಾ ಭಾಷೆಗಳ ಪಟ್ಟಿ ಮಾಡಿ ಎಲ್ಲಾ ಭಾಷೆಗೆ ಒಂದೊಂದ್ ಗುರ್ತ ಕೊಟ್ಟವೆ. ಅದಿಕ್ಕೆ ಹೇಳುವ ಹೆಸರ್ ISO-693 ಅಂತ. ನಮ್ಮ‌ ಊರ್‌ನ ಪ್ರಾದೇಶಿಕ ಭಾಷೆಗಳ್‌ಲಿ ಕನ್ನಡ, ತುಳು, ಕೊಂಕಣಿ, ಮರಾಠಿ ಮತ್ತೆ ಕೊಡವ ಭಾಷೆಗಳಿಗೆನೂ ಈ ಗುರ್ತ ಸಿಕ್ಕಿಟು. ಆದರೆ ಅರೆಭಾಷೆಗೆ ಇದುವರೆಗೆ ಈ ಗುರ್ತ ಸಿಕ್ಕಿತ್‌ಲೆ. ನಮ್ಮ ಪ್ರದೇಶದ ಇನ್ನೊಂದ್ ಭಾಷೆ ಆದ ಹವ್ಯಕ ಭಾಷೆಗೆನೂ ಈ ಗುರ್ತ ಸಿಕ್ಕಿತ್‌ಲೆ. ಈ ಗುರ್ತ ಅಷ್ಟೂ ಅಗತ್ಯನಾಂತ ಕೇಳ್‌ರೆ ಹೌದು ಅಂತನೂ ಹೇಳಕ್ ಅಲ್ಲ ಅಂತನೂ ಹೇಳಕ್. ಮೊದಲಿಗೆ ಆ ಗುರ್ತ ಏಕೆ ಬೇಕು ಅಂತ ನೋಡಮು. 

    ಜಾಗತಿಕ ಮಟ್ಟಲಿ ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ ಉಟ್ಟು. ಆ ಸಮಿತಿ ಕೆಲವ್ ನೀತಿ-ನಿಯಮಗಳ ರೂಪಿಸಿಕಂಡ್ ಮೊದಲಿಗೆ ISO-693 ಗುರ್ತುನ ಎಲ್ಲಾ ಭಾಷೆಗಳಿಗೆ ಕೊಟ್ಟದೆ (ISO-693 ಗುರ್ತುಗ: ಕನ್ನಡ-kn, ತುಳು-tcy, ತಮಿಳು-tn, ಇಂಗ್ಲೀಷ್-en ಹಿಂಗೆ). ಆ ಗುರ್ತ ಕೊಟ್ಟ ಮೇಲೆ, ಒಳ್ಳ ಬೆಳವಣಿಗೆ ಇರುವ ಭಾಷೆಗ, ನಾಶದ ಅಂಚ್‌ಲಿ ಇರುವ ಭಾಷೆಗ, ಬರುವ ತಲೆಮಾರ್‌ಗೆ ನಾಶ ಆಗುವ ಭಾಷೆಗ, ನಾಶ ಆದ ಭಾಷೆಗ, ಹಿಂಗೆ ಸುಮಾರ್ ಪಾಲ್ ಮಾಡಿಕಂಡ್ ಭಾಷೆಗಳ ಅಭಿವೃದ್ಧಿಗೆ ಬೇಕಾದ ಕೆಲಸ ಕಾರ್ಯಗಳ ಹಮ್ಮಿಕಂಡದೆ. ಇಂದ್‌ನ ಡಿಜಿಟಲ್ ಲೋಕಲಿ ನಾವು ಮೊಬೈಲ್ ಅಲ್ಲರೆ ಕಂಪ್ಯೂಟರ್‌ಗಳ್‌ಲಿ ಕನ್ನಡ ಸೇರಿದ ಹಾಂಗೆ ಪ್ರಾದೇಶಿಕ ಭಾಷೆಗಳ ಟೈಪ್ ಮಾಡಿಕೆ ಆದೆ. ನಾವ್‌ಗೆ ಗೊತ್ತೇ ಇಲ್ಲದ ಭಾಷೆನ ಕಣ್ಣ್ ಬುಡುವ ಹೊತ್ತ್‌ಲಿ ಗೂಗಲ್ ಕನ್ನಡಕ್ಕೆ ಅನುವಾದಿಸಿ ಕೊಟ್ಟದೆ. ಇಂಟರ್ನೆಟ್‌ನ 90 ಶೇಕಡಾ ಸೌಲಭ್ಯಗಳ್ ಕನ್ನಡ ಸೇರ್ದ ಹಾಂಗೆ ಪ್ರಾದೇಶಿಕ ಭಾಷೆಲಿ ಸಿಕ್ಕಿದೆ.   ಅಂದರೆ ಯಾವೆಲ್ಲಾ ಭಾಷೆಗಳಿಗೆ ISO-693 ಗುರ್ತ ಉಟ್ಟು, ಆ ಭಾಷೆಗಳ ಮಾತ್ರ ಡಿಜಿಟಲೈಸ್ ಮಾಡಿಕೆ ಆದು. ಆ ಭಾಷೆಗಳ ಮಾತ್ರ ಡಿಜಿಟಲ್‌ ಲೋಕ ಒಪ್ಪುದು ಅಂತ. ಅಂದರೆ ISO-693 ಗುರ್ತ ಇಲ್ಲದ ಕಾರಣಂದಾಗಿ ಅರೆಭಾಷೆ ಅಂತ ಒಂದ್ ಭಾಷೆ ಜಗತ್ತ್‌ಲೇ ಅಸ್ತಿತ್ವನೇ ಇಲ್ಲೆ ಅಂತ ಲೋಕದ ಜನ ಹೇಳೊವೊ. ISO-693 ಗುರ್ತ ಸಿಕ್ಕಕಾದರೆ ಆ ಭಾಷೆಗೆ ಸ್ವತಂತ್ರ ಆದ ವ್ಯಾಕರಣ ಶಾಸ್ತ್ರ, ಲಿಪಿ, ಸಾಹಿತ್ಯದ ದಾಖಲೀಕರಣ (ಬರವಣಿಗೆ, ಶಬ್ದ, ವೀಡಿಯೋ) ಸೇರ್‌ದ ಹಾಂಗೆ ಸುಮಾರ್ ಕಟ್ಟ್‌ನಿಟ್ಟ್‌ನ ನಿಯಮಗಳ್ ಉಟ್ಟು. ಇನ್ನ್ ISO-693 ಇಲ್ಲದ ಕಾರಣಂದ ಅರೆಭಾಷೆ ಒಂದ್ ಸ್ವತಂತ್ರ ಭಾಷೆ ಅಂತ ಲೋಕ ಒಪ್ಪುದುಲೆ ಅಂತ ಆತ್. ಹಂಗಾರೆ ಮತ್ತೆ ಅರೆಭಾಷೆ ಅಂತ ಹೇಳ್‌ರೆ ಕನ್ನಡದ ಒಂದ್ ಉಪಭಾಷೆ ಅಂತ ಹೇಳಿಕೆ ಮಾತ್ರ ಆದು ಅಂತ ಅಮೇರಿಕಲಿ ಕುದ್ದವರ ಅಭಿಪ್ರಾಯ. ಜಾಗತಿಕ ನಿಯಮದ ಪ್ರಕಾರ ಸದ್ಯ ನಾವ್ ಅದರ ಒಪ್ಪಕಷ್ಟೇ. ಅದ್ ಸದ್ಯಕ್ಕೆ ಬುಟ್ಟ್ ಬುಡಿ. 

    ಇಂದ್‌ನ ಡಿಜಿಟಲ್ ಲೋಕಲಿ ಒಂದ್ ಲಿಪಿನ ಉಳ್‌ಸಕಾದರೆ ISO-693 ಗುರ್ತ ಬೇಕೆ ಬೇಕು. ISO-693 ಲಿಪಿ ಇರುವ ಭಾಷೆಲಿ ಸಂಸ್ಕೃತ ಕೂಡ ಒಂದ್. ಸಂಸ್ಕೃತ ಭಾಷೆಗೆ ಸರಳ ಭಾಷೆ, ಸರಸ ಭಾಷೆ ಮತ್ತೆ ದೇವ ಭಾಷೆ ಅಂತ ಗೌರವಂದ ಹೇಳುವೆ. ಸಂಸ್ಕೃತ ಕಲಿಯಕೆನೂ ಅರ್ಥ ಮಾಡಿಕೆನೂ ಸುಲಭಗಡ. ಹಂಗೆನೇ ಪಟ್ಟಾಂಗ ಹೊಡಿಯಕೆ, ದೊಡ್ಡ ದೊಡ್ಡ ಚರ್ಚೆಗಳ ಮಾಡಿಕೆ ಒಳ್ಳ ಭಾಷೆಗಡ. ನಮ್ಮ ದೇಶದ ಸಾಹಿತ್ಯ ಇತಿಹಾಸಲಿ ಇಂದಿಗೆ ಕೂಡ ತುಂಬಾ ಸಂಪತ್ತ್ ಇರುವ ಭಾಷೆ ಸಂಸ್ಕೃತನೇ. ದೇಶ-ವಿದೇಶಗಳ ಜನ ಕೂಡ ಆಶ್ಚರ್ಯಂದ ನೋಡುವ ಲೆಕ್ಕ ಇಲ್ಲದಷ್ಟ್ ವಿಜ್ಞಾನ, ಲೆಕ್ಕ, ಆಯುರ್ವೇದ, ಪುರಾಣ, ಇತಿಹಾಸ ಹಿಂಗೆ ಎಷ್ಟೋ ವಿಷ್ಯಗ ಸಂಸ್ಕೃತಲಿ ಬರೆದ್ ಕಂಡ್ ಉಟ್ಟು. ಒಂದ್ ಕಾಲಲಿ ಸಂಸ್ಕೃತ ರಾಜ ಭಾಷೆ ಆಗಿತ್ತ್‌. ಆದರೆ ಈಗ ಅದರ ಅವಸ್ಥೆ ಹೇಳಿ ಪ್ರಯೋಜನ ಇಲ್ಲೆ‌. ಇಂದ್ ಸಂಸ್ಕೃತ ಮಾತೃಭಾಷೆ ಆಗಿ ಬಳ್‌ಸುದು ಇಡೀ ದೇಶಲಿ ಕಡಿಮೆಲಿ ಕಡಿಮೆ. ವ್ಯವಹಾರಲಿ ಅಂತೂ ಸಂಸ್ಕೃತ ಇಲ್ಲೆ ಅಂತನೇ ಹೇಳಕ್. ಈಗ ಸಂಸ್ಕೃತ ಒಳದ್ ವಿಶ್ವವಿದ್ಯಾಲಯಗಳ ಅಧ್ಯಯನ ಪೀಠಲಿ, ಕೆಲವು ಶಾಲೆ-ಕಾಲೇಜ್‌ಗಳ್‌ಲಿ ಮತ್ತೆ ಹಳೇ ಕಾಲಲಿ ಬರ್‌ದ ಪುಸ್ತಕಲಿ ಮಾತ್ರ. ಕಳೆದ ವರ್ಷ ಯಾವುದೋ ಸುದ್ದಿಲಿ ಬಂದ ವಾರ್ತೆ ನೆಂಪಾದೆ... ಏನ್‌ಂತ ಹೇಳ್‌ರೆ, ಇಡೀ ದೇಶಲಿ ಪ್ರಕಟ ಆಗ್ತಾ ಇರ್‌ವ ಸಂಸ್ಕೃತ ಪೇಪರ್‌ನ ಸಂಖ್ಯೆ ಒಂದ್‌ಗಡ. ಅದೂ ನಮ್ಮ ಕರ್ನಾಟಕಂದ ಪ್ರಕಟ ಆಗ್ತಾ ಒಳದ್. ೨೦೧೧ ರ ಭಾರತದ ಜನಗಣತಿನ ಲೆಕ್ಕದ ಹಾಂಗೆ ಇಡೀ ಭಾರತಲಿ ಇಂದ್ ಸಂಸ್ಕೃತ ಮಾತೃಭಾಷೆ ಆಗಿರುವ ಜನ ದೇಶದ ಜನಸಂಖ್ಯೆನ 0.19% ಮಾತ್ರ. ಅಂದರೆ 2,360,821. ಅರೆಭಾಷೆಗೆ ಲಿಪಿ ಇಲ್ಲದ ಕಾರಣಂದ ISO-693  ಬೆಚ್ಚ ಬೇಡ. ಅರೆಭಾಷೆ ಉಳ್‌ಸಕಾದರೆ, ಅರೆಭಾಷೆನ ಬಳಸುದೊಂದೇ ದಾರಿ. ಬೇರೆ ದಾರಿನೇ‌ ಇಲ್ಲೆ. ಅದ್ ಯಾವ ಭಾಷೆ ಆದರೆನೂ ಹಂಗೆನೆ. ಹೇಂಗೆ ಬಳ್‌ಸಕು...!! ಉತ್ತರ ಸುಲಭ.. ಅರೆಭಾಷಿಕರೊಟ್ಟಿಗೆ ಅರೆಭಾಷೆಲಿ ಮಾತನಾಡಕು, ಅರೆಭಾಷೆಲಿ ಸಾಹಿತ್ಯ ರಚನೆನ ಪ್ರೋತ್ಸಾಹಿಸಕು, ಅರೆಭಾಷೆ ಸಂಸ್ಕೃತಿನ ದಾಖಲೀಕರಣ ಮಾಡಕು. ಕನ್ನಡ ಲಿಪಿ‌ ಉಪಯೋಗಿಸಿಕಂಡ್ ಡಿಜಿಟಲ್ ಲೋಕಲಿ ಅರೆಭಾಷೆನ ಉಪಯೋಗಿಸಕು. ಅರೆಭಾಷೆಗೆ ಒಂದ್ ಚೌಕಟ್ಟ್ ಹಾಕಿಕಂಡ್ ಭಾಷೆಗೆ ಶಿಷ್ಟತೆನ ರೂಪೀಕರಿಸಿಕು. ಅರೆಭಾಷೆಲಿ ಪುಸ್ತಕಗ ಪ್ರಕಟನೆ ಆಕು. ಭಾಷೆನ ಶಿಕ್ಷಣ ಹಂತಕ್ಕೆ ಎತ್ತರ್‌ಸಿಕೆ ಪ್ರಯತ್ನ ಆಕು. ಇಷ್ಟೇ...

ಇದ್ ಅರೆಭಾಷೆಗೆ ಮಾತ್ರ ಅನ್ವಯ ಅಲ್ಲ. ಎಲ್ಲಾ ಭಾಷೆಗೆನೂ...ಅದರ್‌ಲಕ ಕೂಡ ನಮ್ಮ ಭಾರತೀಯ ಭಾಷೆಗೆ...

ಭಾಷೆ ಬಳ್ಸಮು... ಭಾಷೆ ಉಳ್ಸಮು...




Comments

  1. ಅಭಿ ಲೇಕನ‌ಲಾಯಿಕಾವುಟ್ಟು ನಿಮ್ಮ ಅಲೋಚನೆಗ ಸಾ ಲಾಯಿಕುಟ್ಟು. ಕುಸಿ ಆತ್. ಒಂದಷ್ಟು ಕಾರ್ಯಕ್ಕೆ ಬಂದರೆ ನಮ್ಮ ಬಾಸೆಸ ಲೋಕನ ಮಟ್ಟಲಿ ಹೆಸರ್ ಪಡ್ದದೆ.

    ReplyDelete

Post a Comment

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಮಳೆಲಿ ನೆನೆಕುತ ಆಸೆ