Posts

Showing posts with the label ಅಭಿಜಿತ್ ಕೆ ಜೆ

ವರದಿ : ಕಲಾಸ್ಪಂದನ ವೇದಿಕೆಂದ ಅರೆಭಾಷೆ ಉಪನ್ಯಾಸ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಮತ್ತೆ ಕಲಾ ಸ್ಪಂದನ ವೇದಿಕೆ ಇದರ ಕೂಡ್‌ಕಟ್ಟ್‌ಲಿ ಜುಲೈ ತಿಂಗ 14 ಕ್ಕೆ ಮದ್ಯಾಹ್ನ ಎರಡ್ ಗಂಟೆಂದ ಮೂರ್ ಗಂಟೆಮುಟ್ಟ ಗೂಗಲ್ ಮೀಟ್‌ಲಿ "ಲಾಕ್‌ಡೌನ್ ಸಮಯದಲ್ಲಿ ಒಂದಷ್ಟು ವಿಚಾರ ವಿನಿಮಯ" ಕಾರ್ಯಕ್ರಮ ನಡ್ತ್. ಇದರ್‌ಲಿ ಅರೆಭಾಷೆಗೆ ಸಂಬಂದಿಸಿದ ಹಾಂಗೆ ಉಪನ್ಯಾಸ ಏರ್ಪಡಿಸಿದ್ದೊ. ಅರೆಭಾಷೆ ಸಂ. ಮ. ಸಾ. ಸಂಘ ಇದರ ಕಾರ್ಯದರ್ಶಿ ಅಭಿಜಿತ್ ಕೆ ಜೆ ಅವು "ಅರೆಭಾಷೆ ಮತ್ತು ಆಧುನಿಕತೆ" ವಿಷಯದ ಬಗ್ಗೆ ಮಾತನಾಡ್‌ದೊ. ಸಂಘದ ಉಪಾದ್ಯಕ್ಷೆ ಧನ್ಯಶ್ರೀ ಕೆ ಅವು "ಅರೆಭಾಷೆ ಸಾಹಿತ್ಯ ಮತ್ತು ಆಚರಣೆ" ಬಗ್ಗೆ ವಿವರಿಸಿದೊ. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮೋನಿತ ಓ ಜಿ ಅವು ಅರೆಭಾಷೆ ಸಂಸ್ಕೃತಿನ ಬಗ್ಗೆ ವಿವರಣೆ ಕೊಟ್ಟೊ. ನಮ್ಮ ಕಾಲೇಜ್‌ನ ಮಕ್ಕ, ಲೆಕ್ಚರರ್‌ಗ ಸೇರಿ 35 ಜನ ಕಾರ್ಯಕ್ರಮಲಿ ಬಾಗವಹಿಸಿದ್ದೊ. ಕಾಲೇಜ್‌ನ ಬಿ.ಎ ವಿದ್ಯಾರ್ಥಿಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿ ಕೊಟ್ಟ್ ಸಹಕರಿಸಿದೊ. ಈ ಲೋಕ್‌ಡೌನ್ ಸಮಯಲಿ ಕಲಾಸ್ಪಂದನ ವೇದಿಕೆನ ವತಿಂದ ನಡ್ಸಿದ ಒಂಬತ್ತನೇ ಸರಣಿ ಕಾರ್ಯಕ್ರಮ ಇದಾಗಿತ್ತ್.

ಅರೆಭಾಷೆ ಅಂದ್-ಇಂದ್-ನಾಳೆ

Image
|| ✍️ ಅಭಿಜಿತ್ ಕೆ ಜೆ ||  ನಮ್ಮ ಭಾರತ ಸಾವಿರದಷ್ಟ್ ಭಾಷೆಗಳ ಆಸ್ತಿ ಇರುವ ದೇಶ. ನಮ್ಮ ದೇಶಲಿ ಜಗತ್ತ್‌ನ ಯಾವ ದೇಶಲಿ ಕೂಡ ಕಾಂಬಕೆ ಆಗದಷ್ಟ್ ಸಂಖ್ಯೆಲಿ ಬೇರೆ ಬೇರೆ ಭಾಷೆಗ ಉಟ್ಟು. ಎಷ್ಟೋ ಭಾಷೆಗ ಕಾಲದೊಟ್ಟಿಗೆ ಕಾಲ್ ಇಸಿ ನಡಿಯಕೆ ಆಗದೆ ಮಣ್ಣ್ ಮುಚ್ಚಿ ಹೋಗುಟು. 2011 ರ ಜನಗಣತಿನ ಹಾಂಗೆ ನಮ್ಮ ದೇಶಲಿ 122 ಪ್ರದಾನ ಭಾಷೆ ಮತ್ತೆ 1599 ಇತರ ಭಾಷೆ ಉಟ್ಟುಗಡ.       ಭಾಷೇಂತ ಹೇಳ್ದು ಹಳ್ಳದ ನೀರ್‌ನ ಹಾಂಗೆ. ಅದಿಕ್ಕೆ ಸರಿಯಾದ ಆದಿಮೂಲ ಅಂತ ಇಲ್ಲೆ. ಕಾಲಕಾಲಕ್ಕೆ ಹೊಂದಿಕಂಡ್ ಏರ್-ತಗ್ಗ್‌ಗಳ್ ಇದ್ದೇ ಇದ್ದದೆ‌. ಅರೆಗಾಲಲಿ ಹಳ್ಳ ಒಣ್‌ಗಿದ ಹಾಂಗೆ ಆದೆ‌. ಮಳೆಗಾಲ ಬಂದ ಹಾಂಗೆ ಆ ಹಳ್ಳ ಅದರ ಮಿತಿ ಮೀರಿಕಂಡ್ ಹರ‌್ದದೆ... ಆಚೀಚೆ ಇದ್ದ ಚೋಡಿಗಳ್‌ಂದ, ಕೆರೆಗಳ್‌ಂದ ಎಲ್ಲಾ ನೀರ್ ಬಂದ್ ಸೇರ್‌ದೆ. ಹಳ್ಳ ಕೆಲವು ದಿಕ್ಕಿಗೆ ಎತ್ತ್‌ಕನ ನೀರ್ ಪಾಲ್ ಆಗಿ ಬೇರೆ ಬೇರೆ ದಿಕ್ಕಿಗೆನೂ ಹರ್‌ದ್‌ಕಂಡ್ ಹೋದೆ. ಕೊನೆಗೆ ಆ ಹಳ್ಳದ ನೀರ್ ಎತ್ತುದು ಕಡಲ್‌ಗೆ. ಎಲ್ಲಾ ಭಾಷೆನೂ ಹಂಗೆ... ಒಂದೊಂದ್ ಕಾಲಲಿ ಭಾಷೆನ ಆಸ್ತಿ ಹೆಚ್ಚ್‌ತಾ ಹೋದೆ. ಕೆಲವು ಕಾಲಲಿ ಆ ಭಾಷೆ ಅದರ ಅವನತಿನ ಕಡೆಗೆ ಹೋದೆ. ಕೆಲವೊಮ್ಮೆ ಭಾಷೆಗ ಬೇರೆ ಸೋದರ ಭಾಷೆನೊಟ್ಟಿಗೆ ಸೇರಿಕಂಡ್ ಅದರ ಅಸ್ತಿತ್ವನ ಉಳ್‌ಸಿಕೆ ಪ್ರಯತ್ನಿಸಿಕಂಡದೆ, ಇಲ್ಲರೆ, ಕೆಲವು ಸರ್ತಿ ಬೇರೆ ಭಾಷೆಗಳ ಪದ ಸಂಪತ್ತ್‌ನ ತಕಂಡ್‌ ಅದರ್‌ಲಿ ಕೂಡಿ ಬೆಳ್‌ದದೆ.      ಅರೆಭಾಷೆ ...

ಕೆ.ಎಸ್.ಎಸ್‌ಲಿ ಲೇಖನ ಕೌಶಲ್ಯ...

          ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಇದರ ಕೂಡ್‌ಕಟ್ಟ್‌ಲಿ, 2021 ಮಾರ್ಚ್ ತಿಂಗ 8 ನೇ ತಾರೀಕಿಗೆ ಬೊಳ್‌ಪಿಗೆ 9 ಗಂಟೆಂದ ಹಿಂಬೊತ್ತು 5 ಗಂಟೆವರೆಗೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜ್‌ಲಿ 'ಲೇಖನ ಕೌಶಲ್ಯ' ಎಂಬ ಹೆಸರ್‌ಲಿ, ಕಾಲೇಜ್ ಮಕ್ಕಳಿಗೆ ಬರವಣಿಗೆ ಹೇಳಿಕೊಡುವ ಕಾರ್ಯಗಾರ ನಡ್ತ್. ಈ ಕಾರ್ಯಗಾರದ ಅಧ್ಯಕ್ಷತೆನ ಕರ್ನಾಟಕ ಅರೆಭಾಷೆ ಸಂ. ಮ. ಸಾ. ಅಕಾಡಮಿನ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ ಅವು ವಹಿಸಿದ್ದೊ. ಪ್ರಸಿದ್ಧ ಬರಹಗಾರರಾದ ಶ್ರೀ ವಸುಧೇಂದ್ರ ಅವು ಈ ಕಾರ್ಯಗಾರನ ಉದ್ಘಾಟನೆ ಮಾಡಿ ಕಾರ್ಯಕ್ರಮನ ನಡ್ಸಿದೊ. ಕೆ.ಎಸ್.ಎಸ್ ಕಾಲೇಜ್‌ನ ಪ್ರಾಂಶುಪಾಲರ್ ಆದ ಪ್ರೊ| ಉದಯಕುಮಾರ್ ಅವು ಕಾರ್ಯಗಾರದ ಮುಖ್ಯ ಅತಿಥಿ ಆಗಿದ್ದೊ. ಈ ಕಾರ್ಯಗಾರಲಿ ನಮ್ಮ ಕಾಲೇಜ್‌ನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘನ ಪ್ರತಿನಿಧಿಸಿಕಂಡ್ ಕುಲದೀಪ್.ಎಚ್, ಧನ್ಯಶ್ರೀ.ಕೆ, ಮೋನಿತಾ.ಓ.ಜಿ, ವರ್ಷಾ.ಡಿ.ಜೆ ಭಾಗವಹಿಸಿದ್ದೊ. ವರದಿ: ಅಭಿಜಿತ್ ಕೆ ಜೆ 

ಸಂಘದ ಉದ್ಘಾಟನೆ ಜಂಬರ

Image
     ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮತ್ತೆ ಸುಳ್ಯದ ನೆಹರು ಮೆಮೋರಿಯಲ್‌ ಕಾಲೇಜ್‌ನ ಕೂಡ್‌ಕಟ್ಟ್‌ಲಿ 2021ರ ಪೆಬ್ರವರಿ ತಿಂಗ 24 ನೇ ತಾರೀಕಿಗೆ ಸುಳ್ಯದ ಎನ್ನೆಂಸಿ ಕಾಲೇಜ್‌ ಸಭಾಂಗಣಲಿ ʻಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘʼದ ಎನ್ನೆಂಸಿ ಘಟಕದ ಉದ್ಘಾಟನೆ ಜಂಬರ ನಡ್ತ್.‌ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿನ ಅದ್ಯಕ್ಷ ಆದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆಯವು ಜಂಬರದ ಅದ್ಯಕ್ಷತೆನ ವಹಿಸಿದ್ದೊ. ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಶನ್‌ (ರಿ.) ಸುಳ್ಯ ಇದರ ಅದ್ಯಕ್ಷರಾದ ಡಾ| ಕೆ.ವಿ ಚಿದಾನಂದ ಅವು ಕತ್ತಿಲಿ ಕಾಯಿನ ಒಡ್‌ದ್‌, ಕಾಯಿ ನೀರ್‌ನ ತಪಾಲೆಗೆ ಹೊಯ್ದ್ ʻಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘʼನ ಉದ್ಘಾಟನೆ ಮಾಡಿ, ಸಂಘದ ಹೊಸ ಪದಾದಿಕಾರಿಗ ಮತ್ತೆ ಸದಸ್ಯರ್‌ಗೆ ವೀಳ್ಯೆನೂ ಅಡಿಕೆನೂ ಕೊಟ್ಟ್‌ ಜವಾಬ್ದಾರಿ ವಹಿಸಿಕೊಟ್ಟೊ. ಮತ್ತೆ ಅವು ಎಲ್ಲರ ಉದ್ದೇಶಿಸಿ ಅರೆಭಾಷೆಲಿ ಮಾತನಾಡ್‌ದೊ. ಜಂಬರಲಿ ʻಸಾಹೇಬ್ರು ಬಂದವೆʼ ಅರೆಭಾಷೆಲಿ ಅಭಿನಯಿಸಿದ‌ ಎನ್ನೆಂಸಿ ಕೊನೆ ವರ್ಷ ಬಿ.ಎಸ್ಸಿ ವಿದ್ಯಾರ್ಥಿ ಅಶ್ವಿನ್ ಅವುಕೆ ಸನ್ಮಾನ ಮಾಡಿದ್ದೊ. ಕಾರ್ಯಕ್ರಮದ ಮುಖ್ಯ ನೆಂಟ್ರ್‌ಗ ಆದ ನಮ್ಮ ಪ್ರಾಂಶುಪಾಲರ್‌ ಮತ್ತೆ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಪೋಷಕರ್‌ ಆದ ಡಾ. ಪೂವಪ್ಪ ಕಣಿಯೂರು ಅವುನೂ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಸಂಚಾಲಕರ್‌ ಆದ ಶ್ರೀ ಸಂಜೀವ ಕುದ್ಪಾಜೆ ಅವು ಜಂಬರ...

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *