ಹಿಂದೆ ತಿರ್ಗಿ ನೋಡ್ಕನ ಕಂಡ ನೆನಪುಗಳ್...

|| ✍️ ಮೋನಿತ.ಓ.ಜಿ || 
ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ
ನಾ ಹುಟ್ಟಿ ಬೆಳ್ದ ಉಲುಗೂಲಿ ಗ್ರಾಮ
ಅರೆಬಾಸೆಲೇ ಆಡಿ ಪಾಡಿ ಕಲ್ತ ಈ ಶಾಲೆ
ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ

ರಾಜ್ ಮಾಸ್ಟ್ರ ರಾಮಾಯಣ ಪದ್ಯ
ಚೆರಿಯಮನೆ ಮೀನಾಕ್ಷಿ ಟೀಚರ ಆನೆ ಬಾತು ಊರಿಗೆ
ಪಾಂಡಿ ಚಂದ್ರಶೇಖರ್ ಮೇಸ್ಟ್ರ ಕಾರಿನ ಶಬ್ದ
ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ...

ಬೆಣ್ಣೆ ಕಡ್ಡಿನ, ಚಡ್ಡಿ ಜೋಬುಂದ ತೆಗ್ದ್ ಬರೆತಿದ್ದದ್
ಸ್ಲೇಟ್‌ಲಿ, ಅಕ್ಷರ, ಮಗ್ಗಿ, ಕೂಡಿ ಕಳ್ದ್ ಲೆಕ್ಕ ಮಾಡ್ತಿದ್ದದ್
ನೀರ್ ಕಡ್ಡಿ ಉಜ್ಜಿ, ಎಂಜಲ್ ಹಾಕಿ ಅದರ‌್ನ ತಿಕ್ಕುತಿದ್ದದ್
ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ...

ಜೀಪು-ಲಾರಿ ಒಮ್ಮೊಮ್ಮೆ ಕೆಳಗೆ ದಾರಿಲಿ ಓಡಾಡ್ತಿದ್ದದ್
ಯಾಗರ್ ಒಮ್ಮೆ ಯಿಮಾನ ಆಕಾಶಲಿ ಹಾರ‌್ತಿದ್ದದ್
ಆಗ ಕೂಗು ಹಾಕಿ, ನಾವೆಲ್ಲ ಟಾಟಾ ಮಾಡ್ತದ್ದದ್
ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ...

ಕಳ್ಳ-ಪೋಲಿಸ್, ಲಗೋರಿ, ಬೆರ‌್ಸುವ ಆಟ
ಕುಂಟಬಿಲ್ಲೆ, ಚಿಲ್‌ತಿ ಲಗೋರಿ ಆಟ
ನಿಂಬುಳಿ ಹಿಂಡಿ ಅದರ ತಿಂಬೋ ಮಜಾ
ಹಿಂದೆ ತಿರ್ಗಿ ನೋಡ್ಕನ ನಂಗೆ ಈಗ ಗ್ಯಾನಾದೆ...
ಚಿತ್ರ ಕೃಪೆ : ಗೂಗಲ್


Comments

Post a Comment

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ