ಅರೆಭಾಷೆ ದಿನಾಚರಣೆ - ನೆಹರು‌ ಮೆಮೋರಿಯಲ್ ಕಾಲೇಜು ಸುಳ್ಯ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ - ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಕೂಡ್‌ಕಟ್ಟ್‌ಲಿ ಅರೆಭಾಷೆ ದಿನಾಚರಣೆ (ಡಿಸೆಂಬರ್ 15) ನ ಕಾರ್ಯಕ್ರಮ ಕಾಲೇಜ್‌ನ ದೃಶ್ಯ-ಶ್ರಾವ್ಯ ಕೊಠಡಿಲಿ ನಡ್ತ್. ಕಾಲೇಜಿನ ಪ್ರಾಂಶುಪಾಲರ್‌ನೂ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಪೋಷಕರೂ ಆದ ಶ್ರೀ ರುದ್ರಕುಮಾರ್ ಎಂ.ಎಂ ಅವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದೊ. ಅರೆಭಾಷೆ ಸಂಘದ ಸಂಚಾಲಕರಾದ ಶ್ರೀ ಸಂಜೀವ ಕುದ್ಪಾಜೆ ಅವು ಜಂಬರಕ್ಕೆ ಪ್ರಾಸ್ತಾವಿಕ ಮಾತನಾಡ್ದೊ. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಎಂ ಅವು ನೊಙ ಏರ್‌ಸಿ ಕಾರ್ಯಕ್ರಮಕ್ಕೆ ಸಾಂಕೇತಿಕ ಉದ್ಘಾಟನೆ ಮಾಡಿ ಮಾತನಾಡ್ದೊ. ಅರೆಭಾಷೆ ಸಂಸ್ಕೃತಿನ ಉಳ್ಸಿ ಬೆಳ್ಸುವ ಜವಾಬ್ದಾರಿ ಯುವ ಜನತೆನ ಮೇಲೆ ಉಟ್ಟು ಅಂತ ಅವು ಹೇಳ್ದೊ.
ಕಾಲೇಜಿನ ನಿವೃತ್ತ ಪ್ರಾಂಶುಪಾಲರ್ ಹಂಗೆನೇ ಅರೆಭಾಷೆ ಅಕಾಡೆಮಿನ ಮಾಜಿ ಸದಸ್ಯರಾದ ಡಾ. ಪೂವಪ್ಪ ಕಣಿಯೂರು ಅವು ಜಂಬರದ ನೆಂಟ್ರ್‌ಗ ಆಗಿ ಆಗಮಿಸಿ ಅರೆಭಾಷೆನ ಕುರಿತ್ ವೈಚಾರಿಕ ನೆಲೆಕಟ್ಟ್‌ಲಿ ಮಾತನಾಡ್ದೊ. ಮೋಹನ್ ಸೋನಾರ ಸಾಕ್ಷ್ಯಚಿತ್ರಕ್ಕೆ ಪ್ರದರ್ಶನ ಕೊಡ್ತಾ ಅವರ ಕೊಡುಗೆಗ ಅರೆಭಾಷೆ ಅಕಾಡಮಿಗೆ ದೊಡ್ಡ ಪ್ರಮಾಣಲಿ ಉಟ್ಟು, ಕಲೆನ ಉಸಿರ್‌ನ ಹಾಂಗೆ ಇಸಿಕಂಡ ಸೋನಾರ ಬೊದ್‌ಕ್ ಎಲ್ಲವುಕೂ ಮಾದರಿ ಅಂತ ಹೇಳ್ದೊ.
ಜಂಬರದ ಇನ್ನೊಬ್ಬ ನೆಂಟ್ರ್‌ಗ ಆದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮಾಜಿ ಆಡಳಿತ ಮೋಕ್ತೇಸರರ್ ಶ್ರೀ ಲೋಕನಾಥ ಅಮ್ಚೂರು ಅವು ಅರೆಭಾಷೆ ಸಂಸ್ಕೃತಿ ಮತ್ತೆ ಸಾಂಸ್ಕೃತಿಕ ಪರಿವರ್ತನೆಗಳ ಬಗ್ಗೆ ಮಾತನಾಡ್ದೊ. 
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಮತಿ ರತ್ನಾವತಿ ಡಿ. ಅವು ಕಾರ್ಯಕ್ರಮಕ್ಕೆ ಶುಭಹಾರೈಸಿದೊ. ಕಾರ್ಯಕ್ರಮದ ಕೊನೆಲಿ ಮೋಹನ್ ಸೋನ ಅವರ ಸಾಕ್ಷ್ಯಚಿತ್ರ ಪ್ರದರ್ಶನ ನಡ್ತ್. ಕಾಲೇಜ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಎಂ.ಎಲ್, ಉಪಾಧ್ಯಕ್ಷೆ ಪ್ರತೀಕ್ಷ ಡಿ ಮತ್ತೆ  ಕಾಲೇಜ್‌ನ ಎಲ್ಲಾ ಉಪನ್ಯಾಸಕರ್, ಸಿಬ್ಬಂದಿಗ‌ ಮತ್ತೆ ಅರೆಭಾಷೆ ಸಂಘದ ಸದಸ್ಯರ್‌ಗ ಕಾರ್ಯಕ್ರಮಲಿ ಭಾಗವಹಿಸಿದ್ದೊ. ಅರೆಭಾಷೆ ಸಂಘದ ಅಧ್ಯಕ್ಷ ಕುಲದೀಪ್ ಎಚ್ ಸ್ವಾಗತಿಸಿ, ಕಾರ್ಯದರ್ಶಿ ಅಭಿಜಿತ್ ಕೆ.ಜೆ ವಂದಿಸಿದೊ. ಸಾಂಸ್ಕೃತಿಕ ಕಾರ್ಯದರ್ಶಿ ಮೋನಿತಾ ಓ.ಜಿ ಜಂಬರ ನಿರೂಪಣೆ ಮಾಡ್ದೊ.



Comments

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ