ತಮ್ಮುನ ಕಿತಾಪತಿ...
|| ✍️ ಧನ್ಯಶ್ರೀ ಕಳಗಿ ||
ಅದೊಂದು ದೊಡ್ಡ ಅಂಡಮಾನ. ಗುಡ್ಡೆ ಹತ್ತಿಕಂಡ್ ಮಡ್ ರೋಡ್ ಲಿ ಹೋಕು. ಆ ರೋಡೋ ದೂರಕೆ ಬಾರೀ ರೈಸಿದಾಂಗೆ ಕಂಡದೆ. ಎಲ್ಲಾ ಗಾಡಿಗ ಜಾರಿಕಂಡ್, ಬಿದ್ದ್ ಕಂಡ್, ಎದ್ದ್ ಕಂಡ್ ಹೋದಾಂಗೆ ಉಟ್ಟು ತ ನಮ್ಮ ತಮ್ಮು ಹೈದ ಕಾತಿ೯ಂಗಳ ಹರ್ಕೆಗೆ ತರವಾಡಿಗೆ ಹೊಟ೯ವ ಹೇಳಿಕಂತ್. ಈ ಪಿರಿಪಿರಿ ಮಳೆಂದಾಗಿ ರೋಡ್ ನ ಕತೆನ ಹೇಳಿ ಸುಖ ಇಲ್ಲೆ.
ಇಂವ ತಮ್ಮು ಪಾಪ, ಬೆಳ್ಗೆ ಎದ್ದದ್ ಹಂಞ ಹೊತ್ತಾಗಿದ್ , ಚಾಯ ನು ಸರಿ ಕುಡೆದೆ , ಅಂಬೆಪು೯ಲಿ ಒಂದು ಹುಂಜ ಲಾಕಿನ ಚೀಲಲಿ ಹಾಕಂಡ್, ಅಪ್ಪನ ಹಳೇ ಕಾಲದ ಗುಜಿರಿ ಬೈಕ್ ನ ತಕಂಡ್ ಬಂದವ ನಡುದಾರಿಲಿ ಬಂದ್ ನೋಡ್ಕನ ಎಲ್ಲಾ ಜಾರಿಕಂಡ್, ಹೊಣ್ಕಿಕಂಡ್ ಹೋದ ಚಿಂತಾಜನಕ ಅವಸ್ಥೆ ಇಂವಂಗೆ ಕಂಡತ್. ಆದರು ನಮ್ಮ ಹೈದಂದ್ ಬಿಸಿ ರಕ್ತ ನೋಡಿ, 'ಜೈ ಭಜರಂಗಿ'ತ ಹೇಳಿ ಗುಜಿರಿ ಗಾಡಿನ ಹತ್ತಿಸಿತ್.ಜಾರಿಕಂಡ್, ಜಾರಿಕಂಡ್ ಅತ್ತ ಹೋಗಿ ಒಂದ್ ಕೆಸ್ರ್ ಗುಂಡಿಗೆ ಹಾಕಿತ್. ಈ ಹೈದ ಏನು ಮಾಡ್ರು ಗಾಡಿ ಹಂಞನು ಮೆದ್ಕುದುಲೆ. ಗಾಡಿಲಿ ಕುದ್ದು, ಇಳ್ದ್ ದ್ ಹೇಂಗೆ ಹೊಣ್ಕಿರು ಗಾಡಿ ಮುಂದೆನೇ ಹೋದುಲೆ. ಇತ್ತಕೆ ಚೀಲಲಿದ್ದ ಹುಂಜ ಲಾಕಿನು ಪುಸೊ೯ತ್ತಿಲ್ಲದೆ ಹೊಣ್ಕಿದೆ. ತಮ್ಮುಗೆ 'ಇಲ್ಲಿ ಬಂದ್ ದ್ ಕತೆ ಕೆಟ್ಟತ್'ತ ಆತ್. ಹಿಂದಕೆ ಗಾಡಿನ ದೂಡಿ, ಅತ್ತ ಇತ್ತ ಮಾಡಿ ಹೆಂಗಾರ್ ಹೊಂಡಂದ ಗಾಡಿ ಮೇಲೆ ಬಾತ್. ಇನ್ನಾರ್ ಒಮ್ಮೆ ಇಲ್ಲಿಂದ ಹೋಗಿಬುಟ್ಟನೆತ ಜಾರಿಕಂಡ್, ಹತ್ತಿಕಂಡ್ ಹೋದಾಂಗೆ ಅಂಬೆಪು೯ಲಿ ಹಾಕಂಡ್ ಬಂದ ಹವಾಯಿ ಜೋಡುಲಿ ನಿಲ್ಲಿಕೆ ಆಗದೆ ಜಾರ್ಬಂಡಿಲಿ ಜಾರ್ದಾಂಗೆ ಜಾರಿ ಬೀತ್. ಬಿದ್ದದಲಿ೯ ಇಂವ ಒಂದು ಕಡೆ, ಗುಜಿರಿ ಗಾಡಿ ಒಂದು ಕಡೆ, ಕೋಳಿದ್ ಚೀಲ ಒಂದು ಕಡೆ, ಒಟ್ಟುಲಿ ಎಲ್ಲಾ ಮೂಡಾಯಿ,ಪಡ್ಡಾಯಿ ಆಗಿ ಬಿದ್ದೊಳೊ. ಅತ್ತ ಹಲ್ಲ್ ಕಚ್ಚಿಕಂಡ್, ರೋಡಿಗೆ ಶಾಪ ಹಾಕ್ಯಂಡ್, ಕೋಳಿನ ಚೀಲದಕ್ಕಲೆ ಬಂದ್ ನೋಡ್ಕನ ಈ ಚೀಲ ಮಾತ್ರ ಉಟ್ಟು; ಇಂವ ಮನೆಂದ ಹೊರ್ಡುವ ಗಡಿಬಿಡಿಲಿ ಕೋಳಿ ಲಾಕಿನ ಕಾಲ್ ನಾರ್ ಕಟ್ಟಿಟಾ...ಅದೂ ಇಲ್ಲೆ. ಅದರ ಪುರುಂಚಿ ಹಿಡ್ದ್ ದ್ ಚೀಲಲಿ ಹಾಕಿ, ಗಾಡಿಲಿ ಕೋಸಿಕಂಡ್ ಬಂದದ್.ಆ ಲಾಕಿ ಪಾಪ, ಇಂವ ಎಡ್೯ ಸಲ ಬಿದ್ದದಲೆ೯ ಅದರ ಅದ೯ ಜುವ್ವ (ಜೀವ) ಹೋಗಿದ್ದಿದು೯. ಒಮ್ಮೆ ಹೊರಗೆ ಬಂದರೆ ಸಾಕ್ ತ ಕಾದ್ ಕಂಡ್ ಇತ್ತ್ ಕಂಡದೆ. "ಬೊದ್ಕಿರೆ ಬೇಡಿಯಾರ್ ತಿಂಬೆ" ತ ಚೀಲ ಬಿದ್ದಾಂಗೆ ಅದ್ ಎಲ್ಯೋ ಓಡಿಟು. ನಮ್ಮ ತಮ್ಮು ಗೆ ಇದರ ನೋಡಿ 'ಪಿತ್ತ ನೆತ್ತಿಗೇರ್ತ್'. ಆ ರೋಡಿಗೆ ಪರ್ಂಚಿಕಂಡ್, ಗಾಡಿನ ಕರೆಗೆ ನೂಕಿ ಇಸಿದ್ ನಡ್ಕಂಡ್, ಜಾರಿಕಂಡ್ ಹೆಂಗಾರ್ ಮೇಲೆ ಬಾತ್.
ಈ ಕೋಳಿ ಓಡ್ದರ ಒಮ್ಮೆ ಮನೆವ್ಕೆ ಹೇಳೊಮುತ ನೋಡಿರೆ, ಈ ಪಾಟೆ ಮೊಬೈಲ್ ಲಿ ಒಂದು ಕುಟ್ಚಿನು ರೇಂಜ್ ಕಾಂಬೊದುಲೆ. ಅತ್ತ ನೆಟ್ವರ್ಕ್ ಗು ಶಾಪ ಇಸಿಕಂಡ್ ಹೋಗಿ ಹೆಂಗಾರ್ ಸಣಪನ ಜಾಲ್ ಮುಟ್ಟಿಬುಟ್ಟತ್. ಅಲ್ಲಿ ನಡ್ದ ಕತೆನ ಪೂರ ಸಣಪನವ್ಕೆ ಹೇಳಿ ಒಮ್ಮೆ ಈ ಕೆಸ್ರ್ಂದ ಮುಕ್ತಿ ಹೊಂದಿಬುಟ್ಟನೆತ ಹೋಗಿ ಮೀಂದ್ ಬಾತ್. ಮತ್ತೆ ಬಂದ್ ದ್ "ನಿಮ್ಮ ರೋಡ್ಂದಾಗಿ ನನ್ನ ಕೋಳಿ ಓಡ್ತ್ ಸಣಪಾ.."ತ ಹೇಳಿ ಬೆಚ್ಚಲಿ ಕುದ್ದತ್. "ಹೌದಯಾ,,ಓ ರಾಮಾ...ಇನ್ನ್ ಎಂತ ಮಾಡ್ದು, ಬವ೯ ವೊಸ೯ ಇನ್ನೊಂದು ಹೆಚ್ಚಿಗೆ ಕೋಳಿ ಕೊಟ್ನೆ. ನಮ್ಮ ತಪ್ಪುನ ತಿದ್ದಿಕಂಡ್ ಒಳ್ಳ ದಾರಿಲಿ ನಮ್ಮ ನಡ್ಸಿ"ತ ದೆವ್ವ(ದೈವ)ಕೆ ಕೈ ಮುಗ್ದುಕ ತ ಹೇಳ್ದೊ. ತಮ್ಮು ಹೈದ ಹಂಗೆನೆ ನೆನ್ಸಿಕಂಡ್ ಉದ್ದಾಕೆ ಅಡ್ಡ ಬೀತ್. ಅಂತೂ ಹಂಗೆನೆ ಹರ್ಕೆ ಕಾರ್ಯನ ಮುಗ್ಸಿ ಅಲ್ಲಿಂದ ಹೊಟ೯ತ್. ಮತ್ತೆ ಗಾಡಿ ಇದ್ದಲ್ಲಿಗೆ ಬಂದ್ ದ್ ಗಾಡಿನ ಆ ಅಂಡಮಾನಂದ ಹೊರಗೆ ತಾತ್. 'ಸ್ವಾಮಿ ದೈವನೇ ನೀನೇ ನನ್ನ ಬೊದ್ಕಿಸಿದ'ತ ಕೈ ಮುಗ್ದ್ ಆ ರೋಡ್ ನ ತಿರ್ಗಿ ಸನು ನೋಡದೆ ಸೀದಾ ಗಾಡಿ ಸ್ಟಾಟ್೯ ಮಾಡಿ ಹೋತ್ ನಮ್ಮ ತಮ್ಮು ಹೈದ..!

👌👌👌
ReplyDeleteಹ್ಹ ತಮ್ಮು ಹೈದನ ಲಾಯಿಕಾವುಟ್ಟು. ಗಾದೆಗಳ ನೊಡೊಲಿ ಸೇರ್ಸಿಕಂಡದ್ ಕುಸಿ ಆತ್. ಬರೆನಿ ಹೀಂಗೆನೆ.
ReplyDelete