|| ✍️ ಧನ್ಯಶ್ರೀ ಕಳಗಿ || ಅದೊಂದು ದೊಡ್ಡ ಅಂಡಮಾನ. ಗುಡ್ಡೆ ಹತ್ತಿಕಂಡ್ ಮಡ್ ರೋಡ್ ಲಿ ಹೋಕು. ಆ ರೋಡೋ ದೂರಕೆ ಬಾರೀ ರೈಸಿದಾಂಗೆ ಕಂಡದೆ. ಎಲ್ಲಾ ಗಾಡಿಗ ಜಾರಿಕಂಡ್, ಬಿದ್ದ್ ಕಂಡ್, ಎದ್ದ್ ಕಂಡ್ ಹೋದಾಂಗೆ ಉಟ್ಟು ತ ನಮ್ಮ ತಮ್ಮು ಹೈದ ಕಾತಿ೯ಂಗಳ ಹರ್ಕೆಗೆ ತರವಾಡಿಗೆ ಹೊಟ೯ವ ಹೇಳಿಕಂತ್. ಈ ಪಿರಿಪಿರಿ ಮಳೆಂದಾಗಿ ರೋಡ್ ನ ಕತೆನ ಹೇಳಿ ಸುಖ ಇಲ್ಲೆ. ಇಂವ ತಮ್ಮು ಪಾಪ, ಬೆಳ್ಗೆ ಎದ್ದದ್ ಹಂಞ ಹೊತ್ತಾಗಿದ್ , ಚಾಯ ನು ಸರಿ ಕುಡೆದೆ , ಅಂಬೆಪು೯ಲಿ ಒಂದು ಹುಂಜ ಲಾಕಿನ ಚೀಲಲಿ ಹಾಕಂಡ್, ಅಪ್ಪನ ಹಳೇ ಕಾಲದ ಗುಜಿರಿ ಬೈಕ್ ನ ತಕಂಡ್ ಬಂದವ ನಡುದಾರಿಲಿ ಬಂದ್ ನೋಡ್ಕನ ಎಲ್ಲಾ ಜಾರಿಕಂಡ್, ಹೊಣ್ಕಿಕಂಡ್ ಹೋದ ಚಿಂತಾಜನಕ ಅವಸ್ಥೆ ಇಂವಂಗೆ ಕಂಡತ್. ಆದರು ನಮ್ಮ ಹೈದಂದ್ ಬಿಸಿ ರಕ್ತ ನೋಡಿ, 'ಜೈ ಭಜರಂಗಿ'ತ ಹೇಳಿ ಗುಜಿರಿ ಗಾಡಿನ ಹತ್ತಿಸಿತ್.ಜಾರಿಕಂಡ್, ಜಾರಿಕಂಡ್ ಅತ್ತ ಹೋಗಿ ಒಂದ್ ಕೆಸ್ರ್ ಗುಂಡಿಗೆ ಹಾಕಿತ್. ಈ ಹೈದ ಏನು ಮಾಡ್ರು ಗಾಡಿ ಹಂಞನು ಮೆದ್ಕುದುಲೆ. ಗಾಡಿಲಿ ಕುದ್ದು, ಇಳ್ದ್ ದ್ ಹೇಂಗೆ ಹೊಣ್ಕಿರು ಗಾಡಿ ಮುಂದೆನೇ ಹೋದುಲೆ. ಇತ್ತಕೆ ಚೀಲಲಿದ್ದ ಹುಂಜ ಲಾಕಿನು ಪುಸೊ೯ತ್ತಿಲ್ಲದೆ ಹೊಣ್ಕಿದೆ. ತಮ್ಮುಗೆ 'ಇಲ್ಲಿ ಬಂದ್ ದ್ ಕತೆ ಕೆಟ್ಟತ್'ತ ಆತ್. ಹಿಂದಕೆ ಗಾಡಿನ ದೂಡಿ, ಅತ್ತ ಇತ್ತ ಮಾಡಿ ಹೆಂಗಾರ್ ಹೊಂಡಂದ ಗಾಡಿ ಮೇಲೆ ಬಾ...