Posts

Showing posts with the label ಧನ್ಯಶ್ರೀ ಕಳಗಿ

ವರದಿ : ಕಲಾಸ್ಪಂದನ ವೇದಿಕೆಂದ ಅರೆಭಾಷೆ ಉಪನ್ಯಾಸ

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ಮತ್ತೆ ಕಲಾ ಸ್ಪಂದನ ವೇದಿಕೆ ಇದರ ಕೂಡ್‌ಕಟ್ಟ್‌ಲಿ ಜುಲೈ ತಿಂಗ 14 ಕ್ಕೆ ಮದ್ಯಾಹ್ನ ಎರಡ್ ಗಂಟೆಂದ ಮೂರ್ ಗಂಟೆಮುಟ್ಟ ಗೂಗಲ್ ಮೀಟ್‌ಲಿ "ಲಾಕ್‌ಡೌನ್ ಸಮಯದಲ್ಲಿ ಒಂದಷ್ಟು ವಿಚಾರ ವಿನಿಮಯ" ಕಾರ್ಯಕ್ರಮ ನಡ್ತ್. ಇದರ್‌ಲಿ ಅರೆಭಾಷೆಗೆ ಸಂಬಂದಿಸಿದ ಹಾಂಗೆ ಉಪನ್ಯಾಸ ಏರ್ಪಡಿಸಿದ್ದೊ. ಅರೆಭಾಷೆ ಸಂ. ಮ. ಸಾ. ಸಂಘ ಇದರ ಕಾರ್ಯದರ್ಶಿ ಅಭಿಜಿತ್ ಕೆ ಜೆ ಅವು "ಅರೆಭಾಷೆ ಮತ್ತು ಆಧುನಿಕತೆ" ವಿಷಯದ ಬಗ್ಗೆ ಮಾತನಾಡ್‌ದೊ. ಸಂಘದ ಉಪಾದ್ಯಕ್ಷೆ ಧನ್ಯಶ್ರೀ ಕೆ ಅವು "ಅರೆಭಾಷೆ ಸಾಹಿತ್ಯ ಮತ್ತು ಆಚರಣೆ" ಬಗ್ಗೆ ವಿವರಿಸಿದೊ. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮೋನಿತ ಓ ಜಿ ಅವು ಅರೆಭಾಷೆ ಸಂಸ್ಕೃತಿನ ಬಗ್ಗೆ ವಿವರಣೆ ಕೊಟ್ಟೊ. ನಮ್ಮ ಕಾಲೇಜ್‌ನ ಮಕ್ಕ, ಲೆಕ್ಚರರ್‌ಗ ಸೇರಿ 35 ಜನ ಕಾರ್ಯಕ್ರಮಲಿ ಬಾಗವಹಿಸಿದ್ದೊ. ಕಾಲೇಜ್‌ನ ಬಿ.ಎ ವಿದ್ಯಾರ್ಥಿಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿ ಕೊಟ್ಟ್ ಸಹಕರಿಸಿದೊ. ಈ ಲೋಕ್‌ಡೌನ್ ಸಮಯಲಿ ಕಲಾಸ್ಪಂದನ ವೇದಿಕೆನ ವತಿಂದ ನಡ್ಸಿದ ಒಂಬತ್ತನೇ ಸರಣಿ ಕಾರ್ಯಕ್ರಮ ಇದಾಗಿತ್ತ್.

ದೀಪ...

Image
||  ✍️   ಧನ್ಯಶ್ರೀ ಕಳಗಿ ||  ಅಂದ್  ಇದರ ಬೆಳ್ಕ್ ಲೇ ಇಡೀ ಮನೆ ಬೆಳ್ಗ್ ತಿತ್ತ್..  ಇದರ ಬೆಳ್ಕ್ ಲೇ ಸಾಲೆನ ನೋಟ್ಸ್ ಗಳ ಬರೆತಿದ್ದ ದಿನೊಗ ಇದ್ದ. ಅದರೆ ಈಗ ಈ ಸೋಲಾರ್, ಕರೆಂಟ್ ನ ಕಣ್ಣುಕುಕ್ಕುವಂತ ಬೆಳ್ಕ್ ಲಿ ಈ ದೀಪದ ಬೆಳ್ಕ್ ನಮ್ಮ ಕಣ್ಣಿಗೆ ಹಿಡ್ಸುದುಲೆ. ನಾವು ಎಷ್ಟೋ ವೊಸ೯ದ ಮೇಲೆ ಮತ್ತೆ ಈ ಬೆಳ್ಕ್ ಲಿ ಕುದ್ದೊಳ..🙂ನೀವು ಏನೇ ಹೇಳಿ..ಈ ದೀಪದ ಬೆಳ್ಕೇ   ಶಾಶ್ವತ, ಹಂಗೆನೆ ನಮ್ಮ ಮನ್ಸಿಗು ಹಿತ  ಅಲಾ.. 😊 ಚಿತ್ರ ಕೃಪೆ: ಗೂಗಲ್

ತಮ್ಮುನ ಕಿತಾಪತಿ...

||  ✍️ ಧನ್ಯಶ್ರೀ ಕಳಗಿ ||  ಅದೊಂದು ದೊಡ್ಡ ಅಂಡಮಾನ. ಗುಡ್ಡೆ ಹತ್ತಿಕಂಡ್  ಮಡ್ ರೋಡ್ ಲಿ ಹೋಕು. ಆ ರೋಡೋ ದೂರಕೆ ಬಾರೀ ರೈಸಿದಾಂಗೆ ಕಂಡದೆ. ಎಲ್ಲಾ ಗಾಡಿಗ ಜಾರಿಕಂಡ್, ಬಿದ್ದ್ ಕಂಡ್, ಎದ್ದ್ ಕಂಡ್ ಹೋದಾಂಗೆ ಉಟ್ಟು ತ ನಮ್ಮ ತಮ್ಮು  ಹೈದ ಕಾತಿ೯ಂಗಳ ಹರ್ಕೆಗೆ ತರವಾಡಿಗೆ ಹೊಟ೯ವ  ಹೇಳಿಕಂತ್. ಈ ಪಿರಿಪಿರಿ  ಮಳೆಂದಾಗಿ ರೋಡ್ ನ ಕತೆನ ಹೇಳಿ ಸುಖ ಇಲ್ಲೆ.       ಇಂವ ತಮ್ಮು ಪಾಪ, ಬೆಳ್ಗೆ ಎದ್ದದ್ ಹಂಞ ಹೊತ್ತಾಗಿದ್ , ಚಾಯ ನು ಸರಿ ಕುಡೆದೆ , ಅಂಬೆಪು೯ಲಿ ಒಂದು ಹುಂಜ ಲಾಕಿನ ಚೀಲಲಿ ಹಾಕಂಡ್, ಅಪ್ಪನ ಹಳೇ ಕಾಲದ ಗುಜಿರಿ  ಬೈಕ್ ನ ತಕಂಡ್ ಬಂದವ ನಡುದಾರಿಲಿ ಬಂದ್ ನೋಡ್ಕನ  ಎಲ್ಲಾ ಜಾರಿಕಂಡ್, ಹೊಣ್ಕಿಕಂಡ್ ಹೋದ  ಚಿಂತಾಜನಕ ಅವಸ್ಥೆ ಇಂವಂಗೆ ಕಂಡತ್. ಆದರು ನಮ್ಮ ಹೈದಂದ್ ಬಿಸಿ ರಕ್ತ ನೋಡಿ, 'ಜೈ ಭಜರಂಗಿ'ತ ಹೇಳಿ ಗುಜಿರಿ ಗಾಡಿನ ಹತ್ತಿಸಿತ್.ಜಾರಿಕಂಡ್, ಜಾರಿಕಂಡ್ ಅತ್ತ ಹೋಗಿ ಒಂದ್ ಕೆಸ್ರ್ ಗುಂಡಿಗೆ ಹಾಕಿತ್. ಈ ಹೈದ ಏನು ಮಾಡ್ರು ಗಾಡಿ ಹಂಞನು ಮೆದ್ಕುದುಲೆ. ಗಾಡಿಲಿ  ಕುದ್ದು, ಇಳ್ದ್ ದ್ ಹೇಂಗೆ ಹೊಣ್ಕಿರು  ಗಾಡಿ ಮುಂದೆನೇ ಹೋದುಲೆ. ಇತ್ತಕೆ  ಚೀಲಲಿದ್ದ ಹುಂಜ ಲಾಕಿನು ಪುಸೊ೯ತ್ತಿಲ್ಲದೆ  ಹೊಣ್ಕಿದೆ. ತಮ್ಮುಗೆ 'ಇಲ್ಲಿ ಬಂದ್ ದ್ ಕತೆ ಕೆಟ್ಟತ್'ತ ಆತ್. ಹಿಂದಕೆ ಗಾಡಿನ ದೂಡಿ, ಅತ್ತ ಇತ್ತ ಮಾಡಿ ಹೆಂಗಾರ್ ಹೊಂಡಂದ ಗಾಡಿ ಮೇಲೆ ಬಾ...

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *