ಸಂಘದ ಉದ್ಘಾಟನೆ ಜಂಬರ

    ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮತ್ತೆ ಸುಳ್ಯದ ನೆಹರು ಮೆಮೋರಿಯಲ್‌ ಕಾಲೇಜ್‌ನ ಕೂಡ್‌ಕಟ್ಟ್‌ಲಿ 2021ರ ಪೆಬ್ರವರಿ ತಿಂಗ 24 ನೇ ತಾರೀಕಿಗೆ ಸುಳ್ಯದ ಎನ್ನೆಂಸಿ ಕಾಲೇಜ್‌ ಸಭಾಂಗಣಲಿ ʻಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘʼದ ಎನ್ನೆಂಸಿ ಘಟಕದ ಉದ್ಘಾಟನೆ ಜಂಬರ ನಡ್ತ್.‌ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿನ ಅದ್ಯಕ್ಷ ಆದ ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆಯವು ಜಂಬರದ ಅದ್ಯಕ್ಷತೆನ ವಹಿಸಿದ್ದೊ. ಅಕಾಡೆಮಿ ಆಫ್‌ ಲಿಬರಲ್‌ ಎಜ್ಯುಕೇಶನ್‌ (ರಿ.) ಸುಳ್ಯ ಇದರ ಅದ್ಯಕ್ಷರಾದ ಡಾ| ಕೆ.ವಿ ಚಿದಾನಂದ ಅವು ಕತ್ತಿಲಿ ಕಾಯಿನ ಒಡ್‌ದ್‌, ಕಾಯಿ ನೀರ್‌ನ ತಪಾಲೆಗೆ ಹೊಯ್ದ್ ʻಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘʼನ ಉದ್ಘಾಟನೆ ಮಾಡಿ, ಸಂಘದ ಹೊಸ ಪದಾದಿಕಾರಿಗ ಮತ್ತೆ ಸದಸ್ಯರ್‌ಗೆ ವೀಳ್ಯೆನೂ ಅಡಿಕೆನೂ ಕೊಟ್ಟ್‌ ಜವಾಬ್ದಾರಿ ವಹಿಸಿಕೊಟ್ಟೊ. ಮತ್ತೆ ಅವು ಎಲ್ಲರ ಉದ್ದೇಶಿಸಿ ಅರೆಭಾಷೆಲಿ ಮಾತನಾಡ್‌ದೊ. ಜಂಬರಲಿ ʻಸಾಹೇಬ್ರು ಬಂದವೆʼ ಅರೆಭಾಷೆಲಿ ಅಭಿನಯಿಸಿದ‌ ಎನ್ನೆಂಸಿ ಕೊನೆ ವರ್ಷ ಬಿ.ಎಸ್ಸಿ ವಿದ್ಯಾರ್ಥಿ ಅಶ್ವಿನ್ ಅವುಕೆ ಸನ್ಮಾನ ಮಾಡಿದ್ದೊ. ಕಾರ್ಯಕ್ರಮದ ಮುಖ್ಯ ನೆಂಟ್ರ್‌ಗ ಆದ ನಮ್ಮ ಪ್ರಾಂಶುಪಾಲರ್‌ ಮತ್ತೆ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಪೋಷಕರ್‌ ಆದ ಡಾ. ಪೂವಪ್ಪ ಕಣಿಯೂರು ಅವುನೂ ಅರೆಭಾಷೆ ಸಂ. ಮ. ಸಾ. ಸಂಘದ ಗೌರವ ಸಂಚಾಲಕರ್‌ ಆದ ಶ್ರೀ ಸಂಜೀವ ಕುದ್ಪಾಜೆ ಅವು ಜಂಬರನ ಉದ್ದೇಶಿ ಮಾತನಾಡ್‌ದೊ. ಕರ್ನಾಟಕ ಅರೆಭಾಷೆ ಅಕಾಡಮಿನ ಸದಸ್ಯಂಗ ಆದ ಪುರುಷೋತ್ತಮ ಕಿರ್ಲಾಯ, ಎ.ಟಿ ಕುಸುಮಾಧರ, ಕಿರಣ್‌ ಕುಂಬಳಚೇರಿ ಅವುನೂ ಸುಳ್ಯದ ಪತ್ರಕರ್ತ ಬಂದುಗನೂ ಜಂಬರಕ್ಕೆ ಬಂದಿದ್ದೊ. ಜಂಬರಕ್ಕೆ ಬಂದಿದ್ದ ಎಲ್ಲ ಗಣ್ಯರಿಗೆ ಸಂಘದ ಹೊಸ ಪದಾದಿಕಾರಿಗ ಮತ್ತೆ ಸದಸ್ಯಂಗ ವೀಳ್ಯೆನು ಅಡಿಕೆನೂ ಕೊಟ್ಟ್‌ ಗೌರವಿಸಿದ್ದೊ. 

    ಎನ್ನೆಂಸಿನ ಕನ್ನಡ ವಿಭಾಗದ ಉಪನ್ಯಾಸಕ ಆದ ಶ್ರೀ ಸಂಜೀವ ಕುದ್ಪಾಜೆ ಅವು ಬರ್‌ದ ಅರೆಭಾಷೆ ಪ್ರಾರ್ಥನೆಂದ ಸುರುವಾದ ಉದ್ಘಾಟನೆ ಜಂಬರಕ್ಕೆ ಅರೆಭಾಷೆ ಸಂ. ಮ. ಸಾ. ಸಂಘದ ಅದ್ಯಕ್ಷ ಕುಲದೀಪ್‌ ಎಚ್‌ ಅವು ಸ್ವಾಗತಸಿ, ಸಂಘದ ಕಾರ್ಯದರ್ಶಿ ಅಭಿಜಿತ್‌.ಕೆ.ಜೆ ಅವು ದನ್ಯವಾದ ಹೇಳ್ದೊ. ಸಂಘಧ ಸಾಹಿತ್ಯ ಕಾರ್ಯದರ್ಶಿ ಪ್ರತೀಕ್ಷಾ.ಕೆ.ಬಿ ಅವು ಜಂಬರನ ನಿರೂಪಿಸಿದೊ. ಎನ್ನೆಂಸಿನ ವಿದ್ಯಾರ್ಥಿಗ ಮತ್ತೆ ಉಪನ್ಯಾಸಕರ್‌ ಸೇರಿ ಸುಮಾರ್‌ 200 ಜನ ಜಂಬರಲಿ ಬಾಗವಹಿಸಿಯಳೊ.
ವರದಿ : ಅಭಿಜಿತ್.ಕೆ.ಜೆ

ಜಂಬರದ ಚಿತ್ರಗ

1 / 6
2 / 6
3 / 6
4 / 6
5 / 6
6 / 6

ಉದ್ಘಾಟನೆ ಕಾರ್ಯ
ಸಾಹೇಬ್ರು ಬಂದವೆ ನಾಟಕಲಿ ಅಭಿನಯ್‌ಸಿದ‌ ಕೊನೆ ವರ್ಷ ಬಿ.ಎಸ್ಸಿ ವಿದ್ಯಾರ್ಥಿ ಅಶ್ವಿನ್ ಅವುಕೆ ಸನ್ಮಾನ
ಡಾ| ಕೆ.ವಿ ಚಿದಾನಂದ, ಅದ್ಯಕ್ಷರ್‌, ಅಕಾಡಮಿ ಆಫ್‌ ಲಿಬಲರ್‌ ಎಜ್ಯುಕೇಶನ್‌ (ರಿ.) ಸುಳ್ಯ
ಶ್ರೀ ಲಕ್ಷ್ಮೀನಾರಾಯಣ ಕಜೆಗದ್ದೆ, ಅದ್ಯಕ್ಷರ್‌, ಕರ್ನಾಟಕ ಅರೆಭಾಷೆ ಅಕಾಡಮಿ
ಡಾ. ಪೂವಪ್ಪ ಕಣಿಯೂರು, ಪ್ರಾಂಶುಪಾಲರ್‌, ಎನ್ನೆಂಸಿ ಸುಳ್ಯ
ಶ್ರೀ ಸಂಜೀವ ಕುದ್ಪಾಜೆ, ಕನ್ನಡ ಉಪನ್ಯಾಸಕರ್‌, ಎನ್ನೆಂಸಿ ಸುಳ್ಯ





ಸುಳ್ಯದ ಪತ್ರಿಕೆಗಳ್‌ಲಿ ಬಂದ ವರದಿಗ...

    https://amarasuddi.com/2021/02/23/arebashe-sahithya-sanga-nmc/

    http://sullia.suddinews.com/archives/506142

    https://sulliamirror.com/2021/02/arebashe-sanga/


Comments

Post a Comment

ಈ ಬ್ಲಾಗ್‌ನ ಬಗ್ಗೆ ನಿಮ್ಮ ಅಭಿಪ್ರಾಯ / ಸಲಹೆ / ಸಂದೇಶ‌ ನಮ್ಮ ಬ್ಲಾಗ್‌ ತಂಡಕ್ಕೆ ಬರೆದ್ ಕಳ್‌ಸಿ

Name

Email *

Message *

ಹೆಚ್ಚ್‌ ಜನ ಓದಿದ ಪೋಸ್ಟ್‌ಗ

ಅರೆಭಾಷೆ ಅಂದ್-ಇಂದ್-ನಾಳೆ

ಮಳೆಲಿ ನೆನೆಕುತ ಆಸೆ